ಮುಂಬೈ: ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಸತತವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ 2022 ಜನವರಿ 15ರವರೆಗೆ ಸೆಕ್ಷನ್ 144 (ಸಿಆರ್‌ಪಿಸಿ) ವಿಸ್ತರಿಸಲಾಗಿದೆ.
ಮುಂಬೈ: ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳು ಸತತವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ 2022 ಜನವರಿ 15ರವರೆಗೆ ಸೆಕ್ಷನ್ 144 (ಸಿಆರ್‌ಪಿಸಿ) ವಿಸ್ತರಿಸಲಾಗಿದೆ.
ಸಂಜೆ 5ರಿಂದ ಮರುದಿನ ಬೆಳಗ್ಗೆ 5ರವರೆಗೆ ನಾಗರಿಕರು ಬೀಚ್‌ಗಳು, ತೆರೆದ ಮೈದಾನ, ವಾಯುವಿಹಾರ, ಉದ್ಯಾನವನ ಅಥವಾ ಇದಕ್ಕೆ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಕೊರೊನಾ ವೈರಸ್ ಪ್ರಕರಣಗಳು ದಿಢೀರ್ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಹಿರಂಗ ಹಾಗೂ ಒಳಾಂಗಣ ಕಾರ್ಯಕ್ರಮಗಳಲ್ಲಿ 50 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ.
ಈ ಮೊದಲು ತೆರೆದ ಪ್ರದೇಶದಲ್ಲಿ 250 ಹಾಗೂ ಒಳಾಂಗಣ ಸ್ಥಳಗಳಲ್ಲಿ 100 ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಗುರುವಾರ ರಾತ್ರಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದ್ದು, ಮತ್ತಷ್ಟು ನಿರ್ಬಂಧ ಹೇರಲಾಗಿದೆ.
ಅಂತ್ಯ ಸಂಸ್ಕಾರದಲ್ಲಿ 20 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಗುರುವಾರ 5,368 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಹೊಸ ವರ್ಷ ಆಚರಣೆಗೂ ನಿರ್ಬಂಧ ಹೇರಲಾಗಿದೆ.
ದೇಶದಲ್ಲಿ ಇದುವರೆಗೆ 23 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 450 ಪ್ರಕರಣಗಳು ವರದಿಯಾಗಿವೆ.