ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನಾ- ಗ್ರಾಮೀಣ (ಪಿಎಂಎವೈ-ಜಿ) ಅಡಿ ಮುಂದಿನ ವರ್ಷ ಆಗಸ್ಟ್ 15ರೊಳಗೆ 2.02 ಕೋಟಿ ಮನೆಗಳನ್ನು ನಿರ್ಮಿಸುವಂತೆ ಕೇಂದ್ರವು ಕರ್ನಾಟಕ ಸರ್ಕಾರಕ್ಕೆ ಗುರಿ ನಿಗದಿ ಮಾಡಿದೆ.
ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನಾ- ಗ್ರಾಮೀಣ (ಪಿಎಂಎವೈ-ಜಿ) ಅಡಿ ಮುಂದಿನ ವರ್ಷ ಆಗಸ್ಟ್ 15ರೊಳಗೆ 2.02 ಕೋಟಿ ಮನೆಗಳನ್ನು ನಿರ್ಮಿಸುವಂತೆ ಕೇಂದ್ರವು ಕರ್ನಾಟಕ ಸರ್ಕಾರಕ್ಕೆ ಗುರಿ ನಿಗದಿ ಮಾಡಿದೆ.
'ಈ ಯೋಜನೆಯಡಿ ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು 2.95 ಕೋಟಿ ಮನೆಗಳ ನಿರ್ಮಾಣ ಕಾರ್ಯವನ್ನು 2024ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ರಾಜ್ಯಕ್ಕೆ ಸೂಚಿಸಲಾಗಿದೆ' ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವೆ ಸಾಧ್ವಿ ನಿರಂಜನಜ್ಯೋತಿ ಹೇಳಿದ್ದಾರೆ.
'ಯೋಜನೆಯಡಿ ಕರ್ನಾಟಕಕ್ಕೆ 2019-20ನೇ ಸಾಲಿಗೆ 86,000, 2020-21ನೇ ಸಾಲಿಗೆ 1,51,715 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು' ಎಂದು ಅವರು ತಿಳಿಸಿದ್ದಾರೆ.