HEALTH TIPS

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ಜನವರಿಯಲ್ಲಿ 16 ದಿನ ಬ್ಯಾಂಕಿಂಗ್ ಸೇವೆ ಅಲಭ್ಯ!!!

            ನವದೆಹಲಿ: ನೂತನ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇದ್ದು, ಜನವರಿ ತಿಂಗಳಲ್ಲಿ ಬರೊಬ್ಬರಿ 16 ದಿನಗಳ ಕಾಲ ಬ್ಯಾಂಕ್ ಗಳನ್ನು ಮುಚ್ಚಲಾಗುತ್ತಿದೆ.

        ಜನವರಿ 2022ರಲ್ಲಿ ಭಾರತದಲ್ಲಿ ಬ್ಯಾಂಕ್‍ಗಳಿಗೆ ಹಲವು ರಜೆಗಳ ಕಾರಣ ಮುಚ್ಚಲಾಗುತ್ತಿದ್ದು, ಜನವರಿ 2022 ದೇಶಾದ್ಯಂತ 16 ಬ್ಯಾಂಕಿಂಗ್ ರಜಾದಿನಳು ಬಂದಿವೆ. 

                                ದೇಶದ ಎಲ್ಲ ಭಾಗಗಳಲ್ಲಿಯೂ 16 ದಿನ ರಜೆ ಇಲ್ಲ
           ದೇಶಾದ್ಯಂತ ಬ್ಯಾಂಕ್ ಗಳಿಗೆ ಜನವರಿಯಲ್ಲಿ 16 ದಿನ ರಜೆ ಇದೆಯಾದರೂ, ಇದು ದೇಶದ ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಅಂದರೆ ದೇಶದ ಎಲ್ಲಾ ಭಾಗಗಳಲ್ಲಿ ಎಲ್ಲಾ 16 ದಿನಗಳವರೆಗೆ ಬ್ಯಾಂಕ್‍ಗಳನ್ನು ಮುಚ್ಚಲಾಗುವುದಿಲ್ಲ. ಸಂಭ್ರಮಾಚರಣೆ ಕಾರಣ ಕೆಲವು ಬ್ಯಾಂಕುಗಳು ನಿರ್ದಿಷ್ಟ ರಾಜ್ಯದಲ್ಲಿ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಮತ್ತು ದೇಶದ ಇತರ ಭಾಗಗಳಲ್ಲಿ ತೆರೆದಿರುತ್ತವೆ. ಉದಾಹರಣೆಗೆ, ಚೆನ್ನೈನಲ್ಲಿ ಜನವರಿ 28 ರಂದು ಥಾಯ್ ಪೂಸಂಗಾಗಿ ಬ್ಯಾಂಕ್‍ಗಳಿಗೆ ರಜೆ ನೀಡಲಾಗುತ್ತದೆ. ಆದರೆ ಅಸ್ಸಾಂನಲ್ಲಿ ಅಂದು ಬ್ಯಾಂಕ್ ಕಾರ್ಯನಿರ್ವಹಿಸಲಿದೆ.

               ಭಾರತೀಯ ರಿಸರ್ವ್ ಬ್ಯಾಂಕ್ ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಜನವರಿ ತಿಂಗಳಲ್ಲಿ 9 ರಜಾದಿನಗಳು ಇರುತ್ತವೆ. ಉಳಿದ 7 ರಜಾದಿನಗಳು ಭಾನುವಾರ ಮತ್ತು 2 ಶನಿವಾರದಂದು ಇರುತ್ತವೆ. ಬ್ಯಾಂಕುಗಳು ಮುಚ್ಚಲ್ಪಡುವ ದಿನಗಳಲ್ಲಿ, ಗ್ರಾಹಕರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಆನ್‍ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.

                    ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
           ಜನವರಿ 1-ಹೊಸ ವರ್ಷದ ದಿನ, ಜನವರಿ-2 ಭಾನುವಾರ, ಜನವರಿ-3 ಹೊಸ ವರ್ಷದ ಆಚರಣೆ/ಲೂಸೂಂಗ್, ಜನವರಿ 4 -ಲೋಸೂಂಗ್, ಜನವರಿ-8 ಎರಡನೇ ಶನಿವಾರ, ಜನವರಿ-9 ಭಾನುವಾರ, ಜನವರಿ-11 ಮಿಷನರಿ ದಿನ, ಜನವರಿ-12 ಸ್ವಾಮಿ ವಿವೇಕಾನಂದರ ಜನ್ಮದಿನ, ಜನವರಿ 14-ಮಕರ ಸಂಕ್ರಾಂತಿ, ಜನವರಿ 15-ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಾಘೆ ಸಂಕ್ರಾಂತಿ/ಸಂಕ್ರಾಂತಿ ತಿರುವಳ್ಳುವರ್ ದಿನ, ಜನವರಿ 16-ಭಾನುವಾರ, ಜನವರಿ 18-ಥಾಯ್ ಪೂಸಂ, ಜನವರಿ-22 ನಾಲ್ಕನೇ ಶನಿವಾರ, ಜನವರಿ-23 ಭಾನುವಾರ, ಜನವರಿ 26-ಗಣರಾಜ್ಯೋತ್ಸವ, ಜನವರಿ 30-ಭಾನುವಾರ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries