ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2018-19 ರಿಂದ 2020-21 ರ ಅವಧಿಯಲ್ಲಿ ಸರ್ಕಾರವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೀಡಿದ ಜಾಹೀರಾತುಗಳಿಗಾಗಿ 1,700 ಕೋಟಿ ಖರ್ಚು ಮಾಡಿದೆ ಎಂದು ತಿಳಿಸಿದರು.
ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.
ಪತ್ರಿಕೆಗಳಲ್ಲಿನ ಜಾಹೀರಾತುಗಳಿಗಾಗಿ ಸರ್ಕಾರವು ಒಟ್ಟು 826.5 ಕೋಟಿ ಖರ್ಚು ಮಾಡಿದೆ. 2020-21ರಲ್ಲಿ 6,085 ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳಿಗಾಗಿ 118.59 ಕೋಟಿ, 2019-20ರಲ್ಲಿ 5,365 ಪತ್ರಿಕೆಗಳ ಜಾಹೀರಾತಿಗೆ 200 ಕೋಟಿ ಮತ್ತು 2018-19ರಲ್ಲಿ 6,119 ಪತ್ರಿಕೆಗಳ ಜಾಹೀರಾತುಗಳಿಗಾಗಿ 507.9 ಕೋಟಿ ಖರ್ಚಾಗಿರುವುದು ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳಿಂದ ತಿಳಿದು ಬಂದಿದೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಜಾಹೀರಾತುಗಳಿಗಾಗಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಟ್ಟು 193.52 ಕೋಟಿ ವ್ಯಯಿಸಿದೆ.