HEALTH TIPS

ಕೋವಿಡ್-19: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 9 ಸಾವಿರದ 419 ಹೊಸ ಪ್ರಕರಣಗಳು, 159 ಮಂದಿ ಸಾವು

       ನವದೆಹಲಿ: ಓಮಿಕ್ರಾನ್ ಸೋಂಕಿನ ಆತಂಕದ ಮಧ್ಯೆ ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9 ಸಾವಿರದ 419 ಸೋಂಕಿತರು ವರದಿಯಾಗಿದ್ದು 159 ಮಂದಿ ಮೃತಪಟ್ಟಿದ್ದಾರೆ. 

      ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 9 ಸಾವಿರದ 419 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಅಂತೆಯೇ 159 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 8 ಸಾವಿರದ 251 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇದುವರೆಗೆ ದೇಶದಲ್ಲಿ ಒಟ್ಟಾರೆಯಾಗಿ 3 ಕೋಟಿಯ 40 ಲಕ್ಷದ 97 ಸಾವಿರದ 388 ಮಂದಿ ಗುಣಮುಖರಾಗಿದ್ದಾರೆ. 

       ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆ 94 ಸಾವಿರದ 742 ಆಗಿದ್ದು, ಇದುವರೆಗೆ 3 ಲಕ್ಷದ 40 ಸಾವಿರದ 97 ಸಾವಿರದ 388 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೋವಿಡ್ ನಿಂದ ಇದುವರೆಗೆ ಒಟ್ಟಾರೆ 4 ಲಕ್ಷದ 74 ಸಾವಿರದ 111 ಮಂದಿ ಮೃತಪಟ್ಟಿದ್ದಾರೆ. 

      ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭವಾದ ನಂತರ ಇದುವರೆಗೆ 130.39 ಕೋಟಿ ಲಸಿಕೆ ಡೋಸ್ ಗಳನ್ನು ವಿತರಿಸಲಾಗಿದೆ. ಸೋಂಕಿನಿಂದ ಗುಣಮುಖ ಹೊಂದಿದವರ ಪ್ರಮಾಣ ಶೇಕಡಾ 98.36ರಷ್ಟಿದ್ದು ಕಳೆದ ವರ್ಷ ಮಾರ್ಚ್ ನಂತರ ಈ ಬಾರಿ ಗುಣಮುಖ ಹೊಂದಿದವರ ಸಂಖ್ಯೆ ಅಧಿಕವಾಗಿದೆ. 

       ಇದುವರೆಗೆ ದೇಶದಲ್ಲಿ 65.19 ಕೋಟಿ ಕೊರೋನಾ ಪರೀಕ್ಷೆಯನ್ನು ನಡೆಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries