ಬೆಂಗಳೂರು: ಕೋವಿಡ್-19 ವೈರಸ್ ನ ಬಹು ರೂಪಾಂತರಗಳ ವಿರುದ್ಧ ಜೈಡಸ್ ಕ್ಯಾಡಿಲಾ ಸಂಸ್ಥೆಯ ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆ ಪರಿಣಾಮಕಾರಿ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.
ಈ ಕುರಿತು ನಡೆದ ಅಧ್ಯಯನಗಳಿಂದ ಈ ಮಾಹಿತಿ ಹೊರಬಿದಿದ್ದು, ಈ ಅಧ್ಯಯನವನ್ನು ಸಿರಿಯನ್ ಹ್ಯಾಮ್ಸ್ಟರ್‌ಗಳ ಮೇಲೆ ನಡೆಸಲಾಯಿತು ಮತ್ತು ಅಂತರರಾಷ್ಟ್ರೀಯ ಜರ್ನಲ್ "ವೈರಸ್" ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಯ ಹೊಸ ಅಧ್ಯಯನದ ಪ್ರಕಾರ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಸಂಸ್ಥೆಯ ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ (mAb) ಪ್ರಸ್ತುತ ಚಾಲ್ತಿಯಲ್ಲಿರುವ ಡೆಲ್ಟಾ ರೂಪಾಂತರ ಸೇರಿದಂತೆ SARS-CoV-2 (ಕೋವಿಡ್-19) ನ ಬಹು ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಓಮಿಕ್ರಾನ್ ಹೊರಹೊಮ್ಮುವ ಮೊದಲು ಅಧ್ಯಯನವನ್ನು ಕೈಗೊಳ್ಳಲಾಗಿರುವುದರಿಂದ, ಇದರ ವಿರುದ್ಧ ಇದು ಪರಿಣಾಮಕಾರಿಯಾಗಿದೆಯೇ ಅಥವಾ ಇಲ್ಲವೇ ಎಂದು ಹೇಳುವುದು ಕಷ್ಟ ಎಂದು ಐಸಿಎಂಆರ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ ಅವರು, 'ಈ ಅಧ್ಯಯನವನ್ನು ಸಿರಿಯನ್ ಹ್ಯಾಮ್ಸ್ಟರ್‌ಗಳ ಮೇಲೆ ನಡೆಸಲಾಯಿತು ಮತ್ತು ಅಂತರರಾಷ್ಟ್ರೀಯ ಜರ್ನಲ್ "ವೈರಸ್" ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಮೊನೊಕ್ಲೋನಲ್ ಆಂಟಿಬಾಡಿ ಥೆರಪಿ ಸೌಮ್ಯದಿಂದ ಮಧ್ಯಮ ಕೋವಿಡ್-19 ಗೆ ಅನುಸರಿಸುವ ಭರವಸೆಯ ಚಿಕಿತ್ಸೆಗಳಲ್ಲಿ ಒಂದಾಗಿದೆ. ZRC3308 ಮೊನೊಕ್ಲೋನಲ್ ಪ್ರತಿಕಾಯವು ಕೋವಿಡ್ -19 ಚಿಕಿತ್ಸೆಗಾಗಿ ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಅಭಿವೃದ್ಧಿಪಡಿಸಿದ ಚಿಕಿತ್ಸಕವಾಗಿದೆ. ಉತ್ಪನ್ನವನ್ನು ಅದರ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳಲು ಪುಣೆಯ ICMR-NIV ನಲ್ಲಿ ಪರೀಕ್ಷಿಸಲಾಯಿತು. ಕೋವಿಡ್-19 ಚಿಕಿತ್ಸೆಗಾಗಿ, ಪ್ರಯೋಗಾಲಯದ ತನಿಖೆಯು ಪ್ರಸ್ತುತ ಚಲಾವಣೆಯಲ್ಲಿರುವ ಡೆಲ್ಟಾ ರೂಪಾಂತರವನ್ನು ಒಳಗೊಂಡಂತೆ SARS-CoV-2 ನ ಬಹು ರೂಪಾಂತರಗಳ ವಿರುದ್ಧ ಮೊನೊಕ್ಲೋನಲ್ ಪ್ರತಿಕಾಯದ ಪರಿಣಾಮಕಾರಿತ್ವವನ್ನು ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ.
"ಪ್ರಯೋಗಾಲಯದ ಪ್ರಾಣಿಗಳಲ್ಲಿನ ಪ್ರತಿಕಾಯ ಚಿಕಿತ್ಸೆಯು ಕೋವಿಡ್ -19 ತೀವ್ರತೆಯನ್ನು ಕಡಿಮೆ ಮಾಡಿದೆ. ಚಿಕಿತ್ಸೆಯು ರೋಗನಿರೋಧಕ ಬಳಕೆಗೆ ಮತ್ತು ತೀವ್ರವಾದ ಕಾಯಿಲೆಗೆ ಪ್ರಗತಿಯಾಗದ ಆರಂಭಿಕ ಕೋವಿಡ್ -19 ಪ್ರಕರಣಗಳಿಗೆ ಭರವಸೆಯ ಚಿಕಿತ್ಸೆಯಾಗಿ ಕಂಡುಬರುತ್ತದೆ" ಎಂದು ಅವರು ಹೇಳಿದ್ದಾರೆ.