HEALTH TIPS

1963ರಲ್ಲಿ ತೆರೆಕಂಡ "ದಿ ಓಮಿಕ್ರಾನ್ ವೇರಿಯಂಟ್" ಸಿನಿಮಾ?

                ಭಾರತ ಈವರೆಗೆ ಐದು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಜಗತ್ತಿನ 38 ರಾಷ್ಟ್ರಗಳಲ್ಲಿ ಈವರೆಗೂ 674 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿಂದೆ ಅಪಾಯಕಾರಿ ಎಂದು ತಜ್ಞರು ಹೇಳಿದ್ದ ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಓಮಿಕ್ರಾನ್ ಡೇಂಜರ್ ಎಂದು ಹೇಳಲಾಗುತ್ತಿದೆ. ಹೀಗಾಗಿ "OmicronVarient" Twitter ನಲ್ಲಿ ಅಗ್ರಸ್ಥಾನದಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿದೆ.

                 ಇದರ ಮಧ್ಯೆ ಜನರನ್ನು ದಾರಿಗೆ ತಪ್ಪಿಸುವಂತ ಸಂದೇಶಗಳು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. "ದಿ ಓಮಿಕ್ರಾನ್ ವೇರಿಯಂಟ್" ಎಂಬ ಸಿನಿಮಾದ ಶೀರ್ಷಿಕೆ ಹೊಂದಿರುವ ಚಿತ್ರದ ಪೋಸ್ಟರ್‌ನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡಲಾಗಿದೆ. ಇದರೊಂದಿಗೆ "ಭೂಮಿಯನ್ನು ಸ್ಮಶಾನವನ್ನಾಗಿ ಮಾಡಿದ ದಿನ" ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಮಾತ್ರವಲ್ಲದೆ ಈ ಸಿನಿಮಾ 1963ರಲ್ಲಿ ತೆರೆಕಂಡಿತ್ತು ಎಂದು ಹೇಳಲಾಗುತ್ತಿದೆ.



                ಆದರೆ ಈ ವೈರಲ್ ಸಂದೇಶ ಜನರನ್ನು ದಾರಿ ತಪ್ಪಿಸುತ್ತಿದೆ. ನಿಜವಾಗಲೂ 1963 ರಲ್ಲಿ ತೆರೆಕಂಡ ಸಿನಿಮಾನು "ದಿ ಓಮಿಕ್ರಾನ್ ವೇರಿಯಂಟ್" ಅಲ್ಲ. ಬದಲಿಗೆ "ಫೇಸ್ IV" (SUCESOS EN LA IV FASE) ಸಿನಿಮಾ. ಈ ಸಿನಿಮಾದ ಪೋಸ್ಟರ್ ಅನ್ನ ಎಡಿಟ್ ಮಾಡಲಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ""ಫೇಸ್ IV" (SUCESOS EN LA IV FASE) ಈ ಚಿತ್ರ 1963 ರಲ್ಲಿ ತೆರೆಕಂಡಿದೆ ಎಂದು ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಮತ್ತು ಬರಹಗಾರ ಬೆಕಿ ಚೀಟಲ್ ಅವರು ವೈರಲ್ ಪೋಸ್ಟರ್ ಅನ್ನು ತಮಾಷೆಗಾಗಿ ರಚಿಸಿದ್ದಾರೆ. ಹೀಗಾಗಿ "ದಿ ಓಮಿಕ್ರಾನ್ ವೇರಿಯಂಟ್" ಹೆಸರಿನ ಯಾವುದೇ ಚಲನಚಿತ್ರವಿಲ್ಲ ಎನ್ನುವುದು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ತನಿಖೆಯಿಂದ ಸ್ಪಷ್ಟವಾಗಿದೆ.
               ಡಿಸೆಂಬರ್ 1, 2021 ರಂದು ಬೆಕಿ ಚೀಟಲ್ ಅವರು ಪೋಸ್ಟ್ ಮಾಡಿದ ಟ್ವೀಟ್ ನೋಡಬಹುದು. ಇದರಲ್ಲಿ ಅವರು ಫೋಟೋಶಾಪ್ ಬಳಸಿ ವೈರಲ್ ಪೋಸ್ಟರ್ ಅನ್ನು ರಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ತನ್ನ ಜೋಕ್ ಅನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಅವರು ಜನರನ್ನು ವಿನಂತಿದ್ದಾರೆ. ಸ್ಪ್ಯಾನಿಷ್ ವೆಬ್‌ಸೈಟ್‌ನಲ್ಲಿ ವೈರಲ್ ಪೋಸ್ಟರ್‌ನ ಮೂಲ ಫೋಟೋವನ್ನು ಕಂಡುಹಿಡಿಯಲಾಗಿದೆ. ಅಲ್ಲಿ ಇದನ್ನು 1,200 ಯುರೋಗಳಿಗೆ ಮಾರಾಟ ಮಾಡಲಾಗಿದೆ. ಚಿತ್ರದ ಶೀರ್ಷಿಕೆಯನ್ನು ಸ್ಪ್ಯಾನಿಷ್ ಭಾಷೆಯಲ್ಲಿ "SUCESOS EN LA IV FASE" ಎಂದು ಬರೆಯಲಾಗಿದೆ. ಇದು ಸಿನಿಮಾದ ನಿಜವಾದ ಹೆಸರಾಗಿದ್ದು "ದಿ ಓಮಿಕ್ರಾನ್ ವೇರಿಯಂಟ್" ಎನ್ನುವ ಸಿನಿಮಾ ಈವರೆಗೂ ಯಾರೂ ಕೂಡ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.
            ಸ್ಪ್ಯಾನಿಷ್ ವೆಬ್‌ಸೈಟ್‌ನಲ್ಲಿ ವೈರಲ್ ಪೋಸ್ಟರ್‌ನ ಮೂಲ ಫೋಟೋವನ್ನು ಕಂಡುಹಿಡಿಯಲಾಗಿದೆ. ಅಲ್ಲಿ ಇದನ್ನು 1,200 ಯುರೋಗಳಿಗೆ ಮಾರಾಟ ಮಾಡಲಾಗಿದೆ. ಚಿತ್ರದ ಶೀರ್ಷಿಕೆಯನ್ನು ಸ್ಪ್ಯಾನಿಷ್ ಭಾಷೆಯಲ್ಲಿ "SUCESOS EN LA IV FASE" ಎಂದು ಬರೆಯಲಾಗಿದೆ. ಇದು ಸಿನಿಮಾದ ನಿಜವಾದ ಹೆಸರಾಗಿದ್ದು "ದಿ ಓಮಿಕ್ರಾನ್ ವೇರಿಯಂಟ್" ಎನ್ನುವ ಸಿನಿಮಾ ಈವರೆಗೂ ಯಾರೂ ಕೂಡ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಓಮಿಕ್ರಾನ್ ಭೀತಿ; ಅಮೆರಿಕ ಪ್ರಯಾಣಕ್ಕೆ ಹೊಸ ನಿಯಮ IMDb ನಲ್ಲಿ ವಿವರಿಸಿದಂತೆ "SUCESOS EN LA IV FASE" ಚಿತ್ರದ ಕಥಾವಸ್ತು ಹೀಗಿದೆ, "ಮರುಭೂಮಿ ಇರುವೆಗಳು ಇದ್ದಕ್ಕಿದ್ದಂತೆ ಸಾಮೂಹಿಕ ಬುದ್ಧಿವಂತಿಕೆಯಿಂದ ರೂಪಗೊಳ್ಳುತ್ತವೆ ಮತ್ತು ನಿವಾಸಿಗಳ ಮೇಲೆ ದಾಳಿ ಪ್ರಾರಂಭಿಸುತ್ತವೆ. ಇರುವೆಗಳನ್ನು ನಾಶಮಾಡಲು ಇಬ್ಬರು ವಿಜ್ಞಾನಿಗಳು ಮತ್ತು ದಾರಿ ತಪ್ಪಿದ ಹುಡುಗಿಯನ್ನು ಅವರು ಇರುವೆಗಳಿಂದ ರಕ್ಷಿಸುತ್ತಾರೆ". ಆದಾಗ್ಯೂ ಇಲ್ಲಿ, "ಭೂಮಿಯನ್ನು ಸ್ಮಶಾನವನ್ನಾಗಿ ಪರಿವರ್ತಿಸಿದ ದಿನ" ಎಂಬ ಅಡಿಬರಹವನ್ನು ಕಂಡುಕೊಳ್ಳಲಾಗಿದೆ. ಹುಡುಕಾಟದ ವೇಳೆ "Omicron" ಎನ್ನುವ ಹೆಸರು ಹೊಂದಿರುವ ಎರಡು ಸಿನಿಮಾಗಳು ಕಂಡುಬಂದಿವೆ. ಒಂದನ್ನು 1963 ರಲ್ಲಿ ಬಿಡುಗಡೆಯಾದ "ಓಮಿಕ್ರಾನ್" ಎಂದು ಕರೆಯಲಾಗುತ್ತದೆ. ಇನ್ನೊಂದು 2013 ರ ಚಲನಚಿತ್ರ "ದಿ ವಿಸಿಟರ್ ಫ್ರಮ್ ಪ್ಲಾನೆಟ್ ಓಮಿಕ್ರಾನ್" ಎಂದು ಹೆಸರಿಸಲಾಗಿದೆ. ಆದರೆ ಈ ಸಿನಿಮಾಗಳು ಯಾವುದೇ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿಲ್ಲ. ಆದ್ದರಿಂದ ವೈರಲ್ ಪೋಸ್ಟರ್ ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.



Hi. It's been brought to my attention that one of my posters is circulating on Spanish language Twitter as "proof" of a COVID hoax. It's just a goof because I thought Omicron Variant sounded like a 70s sci-fi movie. Please do not get sick on account of my dumb joke. Thanks
Quote Tweet
Becky Cheatle
@BeckyCheatle
·
I Photoshopped the phrase "The Omicron Variant" into a bunch of 70s sci-fi movie posters #Omicron
Show this thread
Image
Image
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries