ನವದೆಹಲಿ: 2022 ಜನವರಿ 1ರಿಂದ ಎಟಿಎಂ ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ ಪರಿಷ್ಕರಿಸಿದೆ.
ನವದೆಹಲಿ: 2022 ಜನವರಿ 1ರಿಂದ ಎಟಿಎಂ ವಿತ್‌ಡ್ರಾ ಪ್ರಕ್ರಿಯೆ ಮೇಲೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಆರ್‌ಬಿಐ ಪರಿಷ್ಕರಿಸಿದೆ.
ಹಣ ಹಿಂತೆಗೆದುಕೊಳ್ಳುವ ಉಚಿತ ಮಿತಿಗಳನ್ನು ಮೀರಿದ ಮೇಲೆ ಇಲ್ಲಿಯವರೆಗೆ ಸಾರ್ವಜನಿಕ ರಂಗದ ಬ್ಯಾಂಕುಗಳು ಹಾಗೆಯೇ ಖಾಸಗಿ ಬ್ಯಾಂಕುಗಳು ಒಂದು ವಹಿವಾಟಿಗೆ ₹20 ವಿಧಿಸುತ್ತಿದ್ದವು.
ಜನವರಿ 1 ರಿಂದ ಗ್ರಾಹಕ ತನ್ನ ಉಚಿತ ಮಿತಿಗಳನ್ನು ಮೀರಿ ಹಣ ಹಿಂತೆಗೆದರೆ ಒಂದು ವಹಿವಾಟಿಗೆ ₹21 ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.
ಯಾವುದೇ ಗ್ರಾಹಕ ತನ್ನ ಮೂಲ ಬ್ಯಾಂಕ್ ಎಟಿಎಂನಿಂದ ಐದು ಬಾರಿ ಹಾಗೂ ಇತರೆ ಬ್ಯಾಂಕ್ ಎಟಿಎಂನಿಂದ ಮೂರು ಬಾರಿ ಉಚಿತವಾಗಿ ಹಣ ಹಿಂತೆಗೆಯಬಹುದು. (ನಾನ್ ಮೆಟ್ರೊ ಸಿಟಿಗಳಲ್ಲಿ ಐದು ಬಾರಿ). ಈ ಕ್ರಮವನ್ನು ಆರ್‌ಬಿಐ ಸಮರ್ಥಿಸಿಕೊಂಡಿರುವುದಾಗಿ ಡಿಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.