ಕಾಸರಗೋಡು: ಕೇರಳದಲ್ಲಿ 2022ನೇ ಇಸವಿ ವೇಳೆಗೆ ಒಂದು ಸಾವಿರ ಹಸಿರು ಗ್ರಾಮ ನಿರ್ಮಾಣ ಗುರಿಯಿರಿಸಿಲಾಗಿದ್ದು, ಪ್ರತಿ ಕೃಷಿಭವನದ ಅಧೀನದಲ್ಲಿ ಮಾದರಿ ಕೃಷಿತೋಟವನ್ನು ನಿರ್ಮಿಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದ್ದಾರೆ. ಅವರು ಕಾಸರಗೋಡು ನಗರಸಭಾಂಗಣದಲ್ಲಿ ಹಿರಿಯ ಕೃಷಿ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಅವಲೋಕನಾ ಸಭೆಯಲ್ಲಿ ಮಾತನಾಡಿದರು.
ಕಾಸರಗೋಡನ್ನು ಸಂಪೂರ್ಣ ಜೈವಜಿಲ್ಲೆ ಹಾಗೂ ಬರಡುರಹಿತ ಭೂಮಿಯನ್ನಾಗಿಸುವುದು ಪ್ರಮುಖ ಗುರಿಯಾಗಬೇಕಾಗಿದೆ. ಎಲ್ಲ ಮನೆಯವರನ್ನು ಕೃಷಷಿಯತ್ತ ಆಕರ್ಷಿಸುವುದರ ಜತೆಗೆ ತರಕಾರಿ ಕೃಷಿಯಲ್ಲಿ ಸ್ವಾವಲಂಬಿಗಳನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ನಿರ್ದೇಶಕ ಸುಭಾಷ್, ಹೆಚ್ಚುವರಿ ಕಾರ್ಯದರ್ಶಿ ಸಾಬಿರ್ ಹುಸೈನ್, ಕೃಷಿ ಹೆಚ್ಚುವರಿ ನಿರ್ದೇಶಕರಾದ ಜಾರ್ಜ್ ಅಲೆಕ್ಸಾಂಡರ್, ಎಸ್. ಸಉಕ್ಷ್ಮಾ ಮುಂತಾದವರು ಉಪಸ್ಥಿತರಿದ್ದರು.