ಲಖನೌ: ಕಾರ್ ಕದ್ದಿರುವುದು, ಬೈಕ್, ಕದ್ದಿರುವುದು ಅವುಗಳ ಬಿಡಿ ಭಾಗಗಳನ್ನು ಕದಿಯುವು ಇತ್ತಿಚೀನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ. ಆದರೆ ಯುದ್ಧ ವಿಮಾನಗಳ ಟೈರ್ ನ್ನು ಕದ್ದಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ?
ಯುದ್ಧ ವಿಮಾನ ಮಿರಾಜ್-200 ರ ಹೊಚ್ಚ ಹೊಸ ಟೈರ್ ಕಳ್ಳತನವಾಗಿರುವ ಬಗ್ಗೆ ಲಖನೌ ನ ಆಷಿಯಾನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಿರಾಜ್-200 ಯುದ್ಧ ವಿಮಾನದ ಟೈರ್ ಗಳನ್ನು ರಾಜಸ್ಥಾನದ ಜೋಧ್ ಪುರಕ್ಕೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಸಿಗುವ ಶಾಹೀನ್ ಪಥ್ ನಲ್ಲಿ ಟ್ರಕ್ ನಿಂದಲೇ ಹೊಸ ಟೈರ್ ಗಳನ್ನು ಎಗರಿಸಿದ್ದಾರೆ ಕಳ್ಳರು.!
ಪೊಲೀಸರು ಟ್ರಕ್ ಡ್ರೈವರ್ ನ್ನು ವಿಚಾರಣೆ ಮಾಡುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಕಾರ್ಪಿಯೋ ವಾಹನದಲ್ಲಿ ಬಂದ ಕೆಲವು ಅನಾಮಿಕ ದುಷ್ಕರ್ಮಿಗಳು, ಚಲಿಸುತ್ತಿದ್ದ ಟ್ರಕ್ ನಲ್ಲಿರಿಸಲಾಗಿದ್ದ, ಟೈರ್ ಗಳಿಗೆ ಬಿಗಿದಿದ್ದ ಹಗ್ಗವನ್ನು ತುಂಡರಿಸಿ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.
ಚಾಲಕನ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲಿಸುತ್ತಿದ್ದಾರೆ. ಮಿರಾಜ್-200 ಕ್ಕೆ ಬಳಸಲಾಗಿವ ಟೈರ್ ಗಳು ಆ ಯುದ್ಧವಿಮಾನವನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಬಳಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಆದರೂ ಕಳ್ಳತನ ನಡೆದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.