ನವದೆಹಲಿ :ಭಾರತದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರವು 2021 ರಲ್ಲಿ ಮತ್ತಷ್ಟು ಹೆಚ್ಚಿದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವ ಅಸಮಾನತೆ ವರದಿ-2022 ತಿಳಿಸಿದೆ.
ವಿಶ್ವ ಅಸಮಾನತೆಯ ಪ್ರಯೋಗಾಲಯದ ಸಹ-ನಿರ್ದೇಶಕ ಲ್ಯೂಕಾಸ್ ಚಾನ್ಸೆಲ್ ಬರೆದಿರುವ ಮತ್ತು ಪ್ರಸಿದ್ಧ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರಿಂದ ಸಮನ್ವಯಗೊಳಿಸಿದ ವರದಿಯು ಭಾರತದ ಜನಸಂಖ್ಯೆಯ ಅಗ್ರ 1 ಶೇಕಡಾ ಜನರು ಒಟ್ಟು ರಾಷ್ಟ್ರೀಯ ಆದಾಯದ ಐದನೇ ಒಂದು ಭಾಗಕ್ಕಿಂತ ಹೆಚ್ಚು ಹಾಗೂ ಅಗ್ರ 10 ಶೇ.
ಇದಕ್ಕೆ ವಿರುದ್ಧವಾಗಿ, ಕೆಳಾರ್ಧ ಜನಸಂಖ್ಯೆಯು ಒಟ್ಟು ಆದಾಯದ ಕೇವಲ 13 ಶೇ. ದಷ್ಟನ್ನು ಹೊಂದಿದೆ.
"ಭಾರತವು ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಹಾಗೂ ಅತ್ಯಂತ ಅಸಮಾನ ದೇಶವಾಗಿ ಎದ್ದು ಕಾಣುತ್ತದೆ" ಎಂದು ವಿಶ್ವ ಅಸಮಾನತೆಯ ಪ್ರಯೋಗಾಲಯದ ವರದಿ ಹೇಳಿದೆ. ಇದು ವಿಶ್ವಾದ್ಯಂತ ಅಸಮಾನತೆಯ ಬಗ್ಗೆ ಪುರಾವೆ ಆಧಾರಿತ ಸಂಶೋಧನೆಯ ಮೂಲಕ ಕೆಲಸ ಮಾಡುತ್ತದೆ.
ವರದಿಯ ಪ್ರಕಾರ, ಭಾರತದಲ್ಲಿ ಮನೆಯೊಂದರ ಸರಾಸರಿ ವರಮಾನ ರೂ 9,83,010 ಆಗಿದೆ. ತಳಮಟ್ಟದ 50 ಶೇ. ಜನರು ಬಹುತೇಕ ಏನನ್ನೂ ಹೊಂದಿಲ್ಲ. ಏಕೆಂದರೆ ಅವರ ಸರಾಸರಿ ಆದಾಯ 66,280 ರೂ.
ಮಧ್ಯಮ ವರ್ಗದವರೂ ತುಲನಾತ್ಮಕವಾಗಿ ಬಡವರಾಗಿದ್ದು, ಸರಾಸರಿ ಸಂಪತ್ತು 7,23,930 ರೂ. ಅದೇ ಸಮಯದಲ್ಲಿ, ಜನಸಂಖ್ಯೆಯ ಅಗ್ರ 10 ಶೇ. ಜನರು ಸುಮಾರು 63,54,070 ರೂ.ಗಳನ್ನು ಹೊಂದಿದ್ದಾರೆ,
ಶೇ.1ರಷ್ಟು ಭಾರತೀಯರ ಆದಾಯ 3,24, 49, 360 ರೂ. ಆಗಿದೆ.