ತಿರುವನಂತಪುರ: ರಾಜ್ಯ ಸರ್ಕಾರವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಸಾರ್ವಜನಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಯುವ ಉದ್ಯಮಿಗಳು ಮತ್ತು ಸಣ್ಣ ಉದ್ಯಮಗಳಂತಹ ವಿವಿಧ ಕ್ಷೇತ್ರಗಳಲ್ಲಿ ಇರುವವರಿಗೆ ಅನರ್ಟ್ ಮೂಲಕ ರಾಜ್ಯ ಸರ್ಕಾರವು ಪ್ರಶಸ್ತಿಗಳನ್ನು ನೀಡುತ್ತದೆ.
1 ಏಪ್ರಿಲ್ 2019 ರಿಂದ 31 ಮಾರ್ಚ್ 2021 ರವರೆಗಿನ ಚಟುವಟಿಕೆಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ರಚಿಸಲಾದ ಮೇಲ್ವಿಚಾರಣಾ ಸಮಿತಿಯು ಪ್ರಶಸ್ತಿಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದೆ. ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಪುರಸ್ಕøತರಿಗೆ 1 ಲಕ್ಷ ರೂ., ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಈ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರಶಸ್ತಿಯನ್ನು ಫೆಬ್ರವರಿ 28, 2022 ರಂದು ರಾಷ್ಟ್ರೀಯ ವಿಜ್ಞಾನ ದಿನದಂದು ನೀಡಲಾಗುವುದು. ಅರ್ಜಿ ನಮೂನೆಗಳು ಮತ್ತು ಇತರ ಮಾರ್ಗಸೂಚಿಗಳು ಅನರ್ಟ್ ನ ವೆಬ್‍ಸೈಟ್ ತಿತಿತಿ.ಚಿಟಿeಡಿಣ.gov.iಟಿ ನಲ್ಲಿ ಲಭ್ಯವಿದೆ ಅರ್ಜಿಗಳು 31ನೇ ಡಿಸೆಂಬರ್ 2021 ರ ಮೊದಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅನರ್ಟ್, ವಿಕಾಸ್ ಭವನ ಪಿ.ಒ. - 695 033 ನ್ನು ತಲುಪುವಂತೆ ಕಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1800 425 1803 ನ್ನು ಸಂಪರ್ಕಿಸಬಹುದು.