ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಸೇತುವೆಯು ಬಹುಶಃ ಡಿಸೆಂಬರ್ 2022ರ ವೇಳೆಗೆ ರೈಲು ಸಂಚಾರಕ್ಕೆ ಸಿದ್ಧವಾಗಬಹುದು.
ಈ ಸೇತುವೆಯನ್ನು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ-ಬನಿಹಾಲ್ ರೈಲು ವಿಭಾಗದಲ್ಲಿ 1315 ಮೀಟರ್ ಉದ್ದದಲ್ಲಿ ನಿರ್ಮಿಸಲು ವಿನ್ಯಾಸಗೊಳಿಸಲಾಗಿದ್ದು, ಚೆನಾಬ್ ನದಿ ತಳದ ಮಟ್ಟದಿಂದ 359 ಮೀಟರ್ ಎತ್ತರವಾಗಿದ್ದು ಬರೋಬ್ಬರಿ 27,949 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಸೇತುವೆಯ ಕಾರ್ಯಾರಂಭಕ್ಕೆ ಯಾವುದೇ ನಿಖರ ದಿನಾಂಕವನ್ನು ನೀಡದಿದ್ದರೂ, ಈ ಯೋಜನೆಗೆ ಸಂಬಂಧಿಸಿದ ಮೂಲಗಳಿಂದ ಈ ಸೇತುವೆಯು ಡಿಸೆಂಬರ್ 2022ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ.
ಈ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದ್ದು, ಮಹಾತ್ವಾಕಾಂಕ್ಷೆಯ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ(USBRL) ಯೋಜನೆಯ ಭಾಗವಾಗಿ ಭಾರತೀಯ ರೈಲ್ವೇಯ ಎಂಜಿನಿಯರಿಂಗ್ ನ ಅದ್ಭುತವಾಗಿದೆ. ಅದರ ಕೊನೆಯ ಕಮಾನು ಮುಚ್ಚುವ ಕೆಲಸ ಈ ವರ್ಷದ ಏಪ್ರಿಲ್‌ನಲ್ಲಿ ಸೇತುವೆಯ ಮೇಲೆ ಪೂರ್ಣಗೊಂಡಿತು. ಏಕೆಂದರೆ ಅದರ ಸ್ಥಳವು ಅತ್ಯಂತ ಕಠಿಣವಾದ ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ಭಾರತೀಯ ರೈಲ್ವೇ ಒಂದು ಸವಾಲಾಗಿ ತೆಗೆದುಕೊಂಡಿದೆ.
ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ದರ್ಶನ್ ಜರ್ದೋಶ್ ಇತ್ತೀಚೆಗೆ ಟ್ವೀಟ್ ಮಾಡಿದಂತೆ: "ಒಮ್ಮೆ ಸಂಪೂರ್ಣವಾಗಿ ಪೂರ್ಣಗೊಂಡ ನಂತರ, ಸೇತುವೆಯು ನದಿ ತಳದ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿಲ್ಲುತ್ತದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಭಾರತೀಯ ರೈಲ್ವೇಯ ಮತ್ತೊಂದು ಎಂಜಿನಿಯರಿಂಗ್ ನಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.
"ಈ ಸೇತುವೆಯು ಐಕಾನಿಕ್ ಆಗಿರುತ್ತದೆ ಮತ್ತು ಈ ಸೇತುವೆಯ ಮೂಲಕ ಚೆನಾಬ್ ನದಿಯನ್ನು ನೋಡಲು ಮತ್ತು ದಾಟಲು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ" ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದರು, ಸಂಪೂರ್ಣವಾಗಿ ನಿರ್ಮಾಣಗೊಂಡ ನಂತರ ಸೇತುವೆಯ ಕಮಾನು ಸುಮಾರು 35 ಮೀಟರ್ ಆಗಿರುತ್ತದೆ. ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗಿಂತ ಎತ್ತರವಾಗಿದೆ.