ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ನಿಧಿಯಿಂದ ಫಲಾನುಭವಿ ರೈತರಿಗೆ ₹20 ಸಾವಿರ ಕೋಟಿಯನ್ನು ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡಲಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ನಿಧಿಯಿಂದ ಫಲಾನುಭವಿ ರೈತರಿಗೆ ₹20 ಸಾವಿರ ಕೋಟಿಯನ್ನು ಹೊಸ ವರ್ಷದ ಮೊದಲ ದಿನ ಬಿಡುಗಡೆ ಮಾಡಲಿದ್ದಾರೆ.
ಜನವರಿ 1ರಂದು, 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಹಣ ವರ್ಗಾವಣೆಯಾಗಲಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ₹6,000 ಮೂರು ಕಂತುಗಳ ರೂಪದಲ್ಲಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ₹2,000 ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
ಪ್ರಧಾನಿ ಮೋದಿ ಸಾಮಾನ್ಯ ರೈತರ ಏಳ್ಗೆಗೆ ಹಣ ಬಿಡುಗಡೆ ಮಾಡುವ ಮೂಲಕ ತಮ್ಮ ಬದ್ಧತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಪಿಎಂಒ ಹೇಳಿದೆ.