ಪೆರ್ಲ: ಬಜಕೂಡ್ಲು ಏರೋಟಿ ಶ್ರೀ ಧೂಮಾವತೀ ಮತ್ತು ಪರಿವರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಡಿ. 21ಮತ್ತು 22ರಂದು ಜರುಗಲಿದೆ. 21ರಂದು ಸಂಜೆ 6ಕ್ಕೆ ಭಂಡಾರ ತೆಗೆಯುವುದು, 6.30ರಿಂದ ಶ್ರೀಮಹಾಲಿಂಗೇಶ್ವರ ಭಜನಾಸಂಘದಿಂದ ಭಜನೆ, ರಾತ್ರಿ 8ಕ್ಕೆ ಪರಿವಾರ ವ ನೇಮೋತ್ಸವ ನಡೆಯುವುದು.
22ರಂದು ಬೆಳಗ್ಗೆ 9.30ರಿಂದ ಪೆರ್ಲ ಶ್ರೀ ಅಯ್ಯಪ್ಪಸ್ವಾಮಿ ಭಜನಾಸಂಘದಿಂದ ಭಜನೆ, 11.30ಕ್ಕೆ ಶ್ರೀಧೂಮಾವತೀ ದೈವದ ನೇಮೋತ್ಸವ, ಸಂಜೆ 4ಕ್ಕೆ ಪುರಿನಾಗ ಬನದಲ್ಲಿ ನಾಗತಂಬಿಲ ನಡೆಯುವುದು. ರಾತ್ರಿ 8ರಿಂದ ಗುಳಿಗ ಭಂಡಾರಕೊಟ್ಯದಲ್ಲಿ ಶ್ರೀ ಗುಳಿಗ ದೈವದ ಕೋಲ ನಡೆಯುವುದು.