ತಿರುವನಂತಪುರ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 22 ಕೇಂದ್ರಗಳಲ್ಲಿ ಧಾರ್ಮಿಕ ಭಯೋತ್ಪಾದಕರು ನೆಲೆಸಿದ್ದು, ಪೋಲೀಸರು ಮತ್ತು ಸರ್ಕಾರಕ್ಕೆ ಅಂತಹ ಪ್ರದೇಶಗಳಿಗೆ ಪ್ರವೇಶವಿಲ್ಲ ಎಂದು ಹೇಳಿರುವರು.
22 ಕೇಂದ್ರಗಳಲ್ಲಿ ಯಾವುದೇ ತಪಾಸಣೆ ನಡೆಸಲು ಪೋಲೀಸರಿಗೆ ಸಾಧ್ಯವಾಗುತ್ತಿಲ್ಲ. ಸಮನ್ಸ್ ನೀಡಲು ಸಹ ಪೋಲೀಸರಿಗೆ ಅಂತಹ ಕೇಂದ್ರಗಳಿಗೆ ಪ್ರವೇಶವಿಲ್ಲ ಎಂದು ಸುರೇಂದ್ರನ್ ಹೇಳಿದರು.
ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಗೃಹ ಸಚಿವರಾಗಿದ್ದಾಗ ಕೇರಳದಲ್ಲಿ 14 ಕೇಂದ್ರಗಳಿದ್ದು, ರಾಜ್ಯ ಸರ್ಕಾರದಿಂದ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ಸಂಸತ್ತಿನಲ್ಲಿ ಲಿಖಿತವಾಗಿ ಸ್ಪಷ್ಟಪಡಿಸಿದ್ದರು.
ಕರುನಾಗಪಲ್ಲಿ, ಮೈನಾಗಪಲ್ಲಿ, ಮಂಜೇರಿ, ಕೋಝಿಕ್ಕೋಡ್, ಕುಟ್ಟಿಚಿರಾ ಮತ್ತು ಎರ್ನಾಕುಳಂ ಜಿಲ್ಲೆಯ ವಿವಿಧ ಸ್ಥಳಗಳ ಹೆಸರುಗಳನ್ನು ಸುರೇಂದ್ರನ್ ಆರೋಪಿಸಿದ್ದಾರೆ.
ಕರುನಾಗಪಲ್ಲಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಕಚೇರಿಯು ದಾಳಿಯ ಮಾಹಿತಿಯನ್ನು ಉಗ್ರರಿಗೆ ಸೋರಿಕೆ ಮಾಡಿದ್ದು, ದಾಳಿ ಪ್ರಹಸನವಾಗಿದೆ ಎಂದು ಸುರೇಂದ್ರನ್ ಆರೋಪಿಸಿದರು. ಪೋಲೀಸರಲ್ಲಿ ಉಗ್ರಗಾಮಿಗಳ ಉಪಸ್ಥಿತಿಯತ್ತ ಸುರೇಂದ್ರನ್ ಬೆರಳು ತೋರಿಸುತ್ತಿದ್ದಾರೆ.
ಕರುನಾಗಪಲ್ಲಿ ಪೋಲೀಸ್ ಚೆಕ್‍ಪಾಯಿಂಟ್ ಚಿತ್ರೀಕರಣಕ್ಕೆ ಅಧಿಕೃತರಿಗೆ ಅವಕಾಶ ನಿರಾಕರಿಸಲಾಗಿತ್ತು ಎಂದು ಸುರೇಂದ್ರನ್ ಹೇಳಿದರು ಮತ್ತು ಸುದ್ದಿ ವರದಿ ಮಾಡುವುದರಿಂದ ಪತ್ರಕರ್ತರ ಜೀವಕ್ಕೆ ಅಪಾಯವಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪೋಲೀಸ್ ಗೋಬ್ಯಾಕ್ ಎಂಬ ಘೋಷವಾಕ್ಯದೊಂದಿಗೆ ಪಾಪ್ಯುಲರ್ ಫ್ರೆಂಟ್ ಕರುನಾಗಪಲ್ಲಿ ಚೆಕ್‍ಪೆÇೀಸ್ಟ್ ಮೇಲೆ ದಾಳಿ ನಡೆಸಿತ್ತು.
ಐಎಸ್, ಅಲ್ ಖೈದಾ ಮತ್ತು ಲಕ್ಷರ್ ಇ ತೊಯ್ಬಾದಂತಹ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‍ಗಳು ಕೇರಳದಲ್ಲಿ ಕಾರ್ಯಾಚರಿಸುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಕೆ ಸುರೇಂದ್ರನ್ ಬಹಿರಂಗಪಡಿಸಿರುವ ಮಾಹಿತಿ ಕೂಡ ಮಹತ್ವ ಪಡೆದುಕೊಂಡಿದೆ.