HEALTH TIPS

2,400 ಕೋಟಿ ಒಪ್ಪಂದಕ್ಕೆ ಬಿಇಎಲ್‌ನೊಂದಿಗೆ ಎಚ್‌ಎಎಲ್‌ ಸಹಿ

            ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ.

            'ಎಲ್‌ಸಿಎ ತೇಜಸ್‌ ಎಮ್‌ಕೆ1ಎ' ಕಾರ್ಯಕ್ರಮದ ಭಾಗವಾಗಿ ಬಿಇಎಲ್‌ನೊಂದಿಗೆ ₹ 2,400 ಸಾವಿರ ಕೋಟಿ ಒಪ್ಪಂದಕ್ಕೆ ಎಚ್‌ಎಎಲ್‌ ಸಹಿ ಹಾಕಿದೆ.

           ಈ ಮೂಲಕ ಎಚ್‌ಎಎಲ್‌ನ ತೇಜಸ್‌ ವಿಮಾನಗಳ ತಯಾರಿಕೆಗೆ 20 ವಿವಿಧ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಪೂರೈಕೆಯ ಹೊಣೆಯನ್ನು ಬಿಇಎಲ್‌ ಹೊತ್ತುಕೊಂಡಿದೆ.

            2023 ರಿಂದ 2028ರ ವರೆಗಿನ ಈ ಒಪ್ಪಂದವು ತೇಜಸ್‌ ವಿಮಾನಗಳ ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.

            ವಿಮಾನ ನಿಯಂತ್ರಣ ಕಂಪ್ಯೂಟರ್‌ಗಳು, ರಾತ್ರಿ ಸಂಚಾರಕ್ಕೆ ಅಗತ್ಯವಾಗುವ ಸಾಧನಗಳು, 'ಲೈನ್‌ ರಿಪ್ಲೆಸಬಲ್‌ ಯೂನಿಟ್‌'ಗಳು ಸೇರಿದಂತೆ ಪ್ರಮುಖ ಸಾಧನಗಳನ್ನು ಬಿಇಎಲ್‌ ಪೂರೈಕೆ ಮಾಡಲಿದೆ ಎಂದು ಎಚ್‌ಎಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

           'ಆತ್ಮನಿರ್ಭರ ಅಭಿಯಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತದ ಕಂಪನಿಯೊಂದಿಗೆ ಎಚ್‌ಎಎಲ್‌ ಮಾಡಿಕೊಂಡ ದೊಡ್ಡ ಮೊತ್ತದ ಸರಕು ಪೂರೈಕೆ ಒಪ್ಪಂದ ಇದಾಗಿದೆ' ಎಂದು ಎಚ್‌ಎಎಲ್‌ ಹೇಳಿದೆ.

             ಈ ಕುರಿತು ಹೇಳಿಕೆ ಪ್ರಕಟಿಸಿರುವ ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌, 'ಎಲ್‌ಸಿಎ ತೇಜಸ್ ಕಾರ್ಯಕ್ರಮವು ಎಚ್‌ಎಎಲ್‌, ಡಿಆರ್‌ಡಿಒ ಮತ್ತು ಬಿಇಎಲ್‌ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ ನಡುವಿನ ವ್ಯಾವಹಾರಿಕ ಪಾಲುದಾರಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ. ಬಿಇಎಲ್‌ ಮತ್ತು ಎಚ್‌ಎಎಲ್‌ ಒಪ್ಪಂದವು 'ಮೇಕ್‌ ಇನ್‌ ಇಂಡಿಯಾ' ಅಭಿಯಾನದ ಪ್ರಮುಖ ಭಾಗವಾಗಿದೆ' ಎಂದು ತಿಳಿಸಿದ್ದಾರೆ.

            ಎಚ್‌ಎಎಲ್‌ ಒಪ್ಪಂದದ ಕುರಿತು ಪ್ರತಿಕ್ರಿಯಿಸಿರುವ ಬಿಇಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ,'ಪ್ರತಿಷ್ಠಿತ ಎಲ್‌ಸಿಎ ತೇಜಸ್ ಕಾರ್ಯಕ್ರಮಕ್ಕಾಗಿ ಎಚ್‌ಎಎಲ್‌ನ ಒಪ್ಪಂದವನ್ನು ಸ್ವೀಕರಿಸಲು ನಾವು ಸಂತೋಷ ಪಡುತ್ತೇವೆ. ಎಚ್‌ಎಎಲ್‌ನೊಂದಿಗೆ ಬಲವಾದ ಪಾಲುದಾರಿಕೆ ಮತ್ತು ಜಂಟಿ ಯಶಸ್ಸನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ.

            83 ತೇಜಸ್ ಎಮ್‌ಕೆ1ಎ ಯುದ್ಧ ವಿಮಾನಗಳ ತಯಾರಿಕೆಗೆ ಸಾಧನಗಳ ಪೂರೈಕೆಯನ್ನು ಬೆಂಗಳೂರು ಮತ್ತು ಪಂಚಕುಲ ವಿಭಾಗಗಳಿಂದ ಮಾಡಲಾಗುತ್ತದೆ. ಒಪ್ಪಂದ ಮಾಡಿಕೊಂಡಿರುವ ಎಲ್ಲ ವಸ್ತುಗಳನ್ನು ಬಿಇಎಲ್‌ನಿಂದ ಎಚ್‌ಎಎಲ್‌ಗೆ ಸಿದ್ಧ ಸ್ಥಿತಿಯಲ್ಲಿರುವಂತೆ ಪೂರೈಸಲಾಗುವುದು. 83 ತೇಜಸ್ ಎಮ್‌ಕೆ1ಎ ಆದೇಶದ ಅಡಿಯಲ್ಲಿ ಭಾರತೀಯ ವಾಯುಪಡೆಗೆ 2023-24 ರಿಂದ ಪೂರೈಕೆ ಕಾರ್ಯಗಳು ಪ್ರಾರಂಭವಾಗುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

           ಈ ಯುದ್ಧ ವಿಮಾನಗಳು ಸ್ವದೇಶಿ ವಿಮಾನ ನಿಯಂತ್ರಣ ಹಾಗೂ ಏರ್ ಡೇಟಾ ಕಂಪ್ಯೂಟರ್‌ಗಳನ್ನು ಹೊಂದಿವೆ. ಇವುಗಳನ್ನು ಬಿಇಎಲ್‌ ಪೂರೈಸಲಿದೆ ಎಂದು ಎಚ್‌ಎಎಲ್‌ ಹೇಳಿದೆ.

            ಈ ಒಪ್ಪಂದದ ಹಿನ್ನೆಲೆಯಲ್ಲಿ ಎಡಿಡಿ ಎಂಜಿನಿಯರಿಂಗ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಗಿರೀಶ್‌ ಲಿಂಗಣ್ಣನವರು ಪ್ರಕಟಣೆಯೊಂದನ್ನು ನೀಡಿದ್ದಾರೆ. ಅದರ ಸಾರಾಂಶ ಇಲ್ಲಿದೆ...

           'ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎಸ್‌ಐಪಿಆರ್‌ಐ) ಬಿಡುಗಡೆ ಮಾಡಿರುವ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವರ್ಗಾವಣೆಯ ದತ್ತಾಂಶದ ಪ್ರಕಾರ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತವು ಈಗ ಅತಿದೊಡ್ಡ ಆಮದುದಾರ ದೇಶವಾಗಿದೆ. ಇದು ಸೌದಿ ಅರೇಬಿಯಾ ನಂತರದ ಎರಡನೇ ಅತಿ ದೊಡ್ಡ ಆಮದುದಾರ ದೇಶವಾಗಿದೆ.

         ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದು ಪ್ರಮಾಣದಲ್ಲಿ ಭಾರತವು ಶೇ 9.5 ಹೊಂದಿದೆ. 2011 ರಿಂದ 2015 ಮತ್ತು 2016 ರಿಂದ 2020ರ ನಡುವೆ ಆಮದು ಪ್ರಮಾಣ ಶೇ 33 ರಷ್ಟು ಕಡಿಮೆಯಾಗಿದೆ ಎಂದು ಎಸ್‌ಐಪಿಆರ್‌ಐ ವರದಿ ಬಹಿರಂಗಪಡಿಸಿದೆ.

           ದೇಶವು ನಿಧಾನವಾಗಿ ಮತ್ತು ಸ್ಥಿರವಾಗಿ ಆತ್ಮನಿರ್ಭರದತ್ತ ಸಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಪ್ರಸ್ತುತ ಸರ್ಕಾರವು ದೇಶದೊಳಗೆ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಇದು ವಿಶ್ವದ ಅಗ್ರ ಶಸ್ತ್ರಾಸ್ತ್ರ ತಯಾರಕ ರಾಷ್ಟ್ರಗಳೊಂದಿಗೆ ಜಂಟಿ ಉದ್ಯಮಗಳನ್ನು ಉತ್ತೇಜಿಸಲಿದೆ.

           ಗಮನಿಸಬೇಕಾದ ಅಂಶವೆಂದರೆ, ರಕ್ಷಣಾ ಸಂಗ್ರಹಣೆಯಲ್ಲಿ ಶೇ 70 ಸ್ವಾವಲಂಬನೆಯ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಭಾರತದ ಸ್ವಾವಲಂಬನೆಯು ಸುಮಾರು ಶೇ 35 ರಿಂದ 40 ರಷ್ಟಿದೆ.

            ಎಚ್‌ಎಎಲ್‌ ಮತ್ತು ಬಿಇಎಲ್‌ ಒಪ್ಪಂದವು ಶೇ 70 ಸ್ವಾವಲಂಬನೆಯ ಗುರಿಯನ್ನು ತಲುಪುವಲ್ಲಿ ಮೊದಲ ಹೆಜ್ಜೆಯಾಗಿದೆ'.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries