ತಿರುವನಂತಪುರ: ಕೇರಳದಲ್ಲಿ ಕ್ರಿಸ್‍ಮಸ್ ಅಂಗವಾಗಿ ಶಿಕ್ಷಣ ಸಂಸ್ಥೆಗಳಿಗೆ ಡಿ. 24ರಿಂದ ಜ. 2ರ ವರೆಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ದೀರ್ಘ ಕಾಲದಿಂದ ಮುಚ್ಚುಗಡೆಗೊಂಡಿದ್ದ ಶಾಲೆಗಳನ್ನು ನ. 1ರಿಂದ ತೆರೆದು ಕಾರ್ಯಾಚರಿಸತೊಡಗಿತ್ತು. ತರಗತಿಗಳಲ್ಲಿ ಮಕ್ಕಳ ದಟ್ಟಣೆ ಕಡಿಮೆ ಮಾಡುವ ಹಾಗೂ ಅಂತರ ಪಾಲಿಸುವ ನಿಟ್ಟಿನಲ್ಲಿ ಸೋಮವಾರದಿಂದ ಶನಿವಾರದ ವರೆಗೆ ಮಧ್ಯಾಹ್ನವರೆಗೆ ಬ್ಯಾಚ್ ಗಳಾಗಿ ಮಾತ್ರ ತರಗತಿ ನಡೆಸಲಾಗುತ್ತಿದ್ದು, ಸೋಮವಾರದಿಂದ ಬುಧವಾರದ ವರೆಗೆ ಒಂದು ಹಾಗೂ ಗುರುವಾರದಿಂದ ಶನಿವಾರ ವರೆಗೆ ಇನ್ನೊಂದು ಬ್ಯಾಚ್‍ನಂತೆ ತರಗತಿ ನಡೆಸಿಕೊಂಡು ಬರಲಾಗುತ್ತಿದೆ.