ನವದೆಹಲಿ: ಡಿಸೆಂಬರ್ 26ರವರೆಗೂ 2020-21ನೇ ಸಾಲಿಗಾಗಿ ಸುಮಾರು 4.51 ಕೋಟಿ ಆದಾಯ ತೆರಿಗೆ ರಿಟರ್ನ್ಸ್
ನೋಂದಣಿಯಾಗಿರುವುದಾಗಿ ಆದಾಯ ತೆರಿಗೆ ಇಲಾಖೆ ಸೋಮವಾರ ಹೇಳಿದೆ. ಇದರಲ್ಲಿ ಸುಮಾರು 2.44 ಕೋಟಿ ಐಟಿಆರ್-1 ಮತ್ತು 1.12 ಕೋಟಿ ಐಟಿಆರ್-4 ಕೂಡಾ ಸೇರಿದೆ.
ಐಟಿಆರ್ ಫಾರ್ಮ್ 1 ಮತ್ತು ಐಟಿಆರ್ ಫಾರ್ಮ್ 4 ಸುಲಭ ಫಾರ್ಮ್ ಗಳಾಗಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ದೊಡ್ಡ ಪ್ರಮಾಣದ ತೆರಿಗೆದಾರರಿದ್ದಾರೆ. ಐಟಿಆರ್ ಫಾರ್ಮ್ 1ನ್ನು 50 ಲಕ್ಷದವರೆಗೂ ಆದಾಯವಿರುವವರು ನೋಂದಣಿ ಮಾಡಬಹುದಾಗಿದೆ. ಸಂಬಳದಾರರು, ಒಂದು ಮನೆ ಆಸ್ತಿದಾರರು ಮತ್ತಿತರ ಮೂಲಗಳ ತೆರಿಗೆದಾರರು ಇದನ್ನು ನೋಂದಣಿ ಮಾಡುತ್ತಾರೆ.
ಹಿಂದೂ ಅವಿಭಜಿತ ಕುಟುಂಬಗಳು, 50 ಲಕ್ಷ ರೂ. ಆದಾಯವಿರುವ ಸಂಸ್ಥೆಗಳು, ವ್ಯವಹಾರ ಮತ್ತು ವೃತ್ತಿಯಿಂದ ಆದಾಯ ಪಡೆಯುವವರು ಐಟಿಆರ್- 4 ಫಾರ್ಮ್ ನ್ನು ನೋಂದಣಿ ಮಾಡಬಹುದಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಗಡುವು ವಿಸ್ತರಿಸಲಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ 5.95 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು.