ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರದ ಮಂಡಲ ಪೂಜಾ ಅವಧಿ ಮುಗಿಯುತ್ತಿದ್ದಂತೆ ಅಪ್ಪಂ, ಅರವಣ ಪ್ರಸಾದ ಮಾರಾಟದಿಂದ ದೇವಸ್ವಂ ಮಂಡಳಿಗೆ 27 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ. ಈ ಕುರಿತು ಶಬರಿಮಲೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೃಷ್ಣಕುಮಾರ ವಾರಿಯರ್ ಮಾಹಿತಿ ನೀಡಿದ್ದಾರೆ.
ಅಪ್ಪಂ ಮತ್ತು ಅರವಣ ವಿತರಣೆಯು ಭರದಿಂದ ಸಾಗುತ್ತಿದೆ. ಅಪ್ಪಂ ಪ್ಯಾಕಿಂಗ್ ಗೆ ಸಿಬ್ಬಂದಿ ಕೊರತೆಯಿದ್ದರೂ ಹೆಚ್ಚಿನ ಸಿಬ್ಬಂದಿಯನ್ನು ತೊಡಗಿಸಿಕೊಂಡು ಪರಿಹರಿಸಲು ಸಾಧ್ಯವಾಗಿದೆ. ವಿ.ಕೃಷ್ಣಕುಮಾರ ವಾರಿಯರ್ ಮಾತನಾಡಿ, ಕ್ಷೇತ್ರದ ಮಂಡಲ ಪೂಜಾವಧಿ ಮುಗಿಯುತ್ತಿದ್ದಂತೆ ಅಯ್ಯಪ್ಪನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ ಎಂದಿರುವರು.
ಇದೇ ವೇಳೆಗೆ ದಿನನಿತ್ಯದ ಯಾತ್ರಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯನ್ನು ದೇವಸ್ವಂ ಮಂಡಳಿ ವ್ಯಕ್ತಪಡಿಸಿದೆ. ಹಾಗಾಗಿ ಅಪ್ಪಂ ಮತ್ತು ಅರವಣ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಂಡಳಿ ಅಂದಾಜಿಸಿದೆ.