ಬದಿಯಡ್ಕ: ನೀರ್ಚಾಲು ಸಮೀಪದ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ 27ನೇ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ಜರಗಿತು. ಬೆಳಗ್ಗೆ ದೀಪ ಪ್ರತಿಷ್ಠೆ, ಶರಣಂ ವಿಳಿ, ಗಣಪತಿ ಹೋಮ ಜರಗಿತು. ನಂತರ ಶ್ರೀ ಅಯಪ್ಪ ಸೇವಾ ಸಂಘ ಚುಕ್ಕಿನಡ್ಕ, ಶ್ರೀ ವೆಂಕಟ್ರಮಣ ಭಜನಾ ಸಂಘ ಮಾನ್ಯ ಇವರಿಂದ ಭಜನೆ ಹಾಗೂ ಬದಿಯಡ್ಕ ಶ್ರೀ ಲಕ್ಷ್ಮೀಗಣೇಶ ಕುಣಿತ ಭಜನಾ ಸಂಘ ಇವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಅನ್ನದಾನ ನಡೆಯಿತು. ಸಂಜೆ ಗಂಗಾಧರನ್ ಮಾರಾರ್ ಮತ್ತು ಬಳಗ ನೀಲೇಶ್ವರ ಇವರಿಂದ ತಾಯಂಬಕ, ಸಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಸಂಘ ಕಾರ್ಮಾರು ಹಾಗೂ ಶ್ರೀ ಆದಿಶಕ್ತಿ ಅಯ್ಯಪ್ಪ ಭಜನಾ ಸಂಘ ಕುಂಟಾಲುಮೂಲೆ ಇವರಿಂದ ಭಜನೆ ಜರಗಿತು. ರಾತ್ರಿ ಮಹಾಪೂಜೆ ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.