HEALTH TIPS

ಗುಜರಾತ್‌: ಕಾಲಿನಲ್ಲಿ ಅನುಮಾನಾಸ್ಪದ ಸಾಧನ ಹೊಂದಿದ್ದ 2 ಪಾರಿವಾಳಗಳು ಪತ್ತೆ-ತನಿಖೆ

        ಪೋರಬಂದರ್‌: ಕಾಲುಗಳಲ್ಲಿ ಸಾಧನ ಹೊಂದಿದ್ದ ಎರಡು ಅನುಮಾನಾಸ್ಪದ ಪಾರಿವಾಳಗಳನ್ನು ಇಲ್ಲಿನ ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

      ಈ ಘಟನೆ ಶನಿವಾರ ನಡೆದಿದ್ದು, ಪಾರಿವಾಳಗಳು ತಮ್ಮ ಕಾಲುಗಳಲ್ಲಿ ಉಂಗುರದ ಆಕಾರದ ಸಣ್ಣ ಸಾಧನವನ್ನು ಹೊಂದಿದ್ದವು ಎಂದು ತಿಳಿದುಬಂದಿದೆ.

        ಡಿಸೆಂಬರ್ 5 ರಂದು ಈ ಪಾರಿವಾಳಗಳು ಮೀನುಗಾರಿಕಾ ದೋಣಿಯಲ್ಲಿ ಬಂದು ಕುಳಿತಿವೆ. ಈ ದೋಣಿಯು ಶನಿವಾರ ಪೋರಬಂದರ್‌ಗೆ ತಲುಪಿದೆ. ಆ ನಂತರ ದೋಣಿ ಮಾಲೀಕರು ನಮಗೆ ಮಾಹಿತಿ ನೀಡಿದರು' ಎಂದು ‍ಪೊಲೀಸ್‌ ಅಧಿಕಾರಿ ಸ್ಮಿತ್‌ ಗೋಹಿಲ್‌ ತಿಳಿಸಿದ್ದಾರೆ.

      'ಅರಣ್ಯ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಸಾಧನವನ್ನು ಪಕ್ಷಿಗಳ ಕಾಲಿನಿಂದ ತೆಗೆದುಹಾಕಲಾಗುವುದು. ಆ ನಂತರ ಪರೀಕ್ಷೆಗಾಗಿ ಸಾಧನವನ್ನು ಗಾಂಧಿನಗರಕ್ಕೆ ಕಳುಹಿಸಲಾಗುವುದು' ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries