ಪಟ್ನಾ: ಎರಡು ತಿಂಗಳ ಹಿಂದೆ ಸಾವಿಗೀಡಾಗಿದ್ದ ಮಹಿಳೆಯೊಬ್ಬರಿಗೆ ಕೋವಿಡ್-19 ಲಸಿಕೆ ಎರಡನೇ ಡೋಸ್ ನೀಡಿಕೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಬಂದಿದ್ದು, ಆಕೆಯ ಪತಿ ಅದನ್ನು ನೋಡಿ ಆಶ್ಚರ್ಯಕ್ಕೀಡಾಗಿದ್ದಾರೆ.
ಪಟ್ನಾ: ಎರಡು ತಿಂಗಳ ಹಿಂದೆ ಸಾವಿಗೀಡಾಗಿದ್ದ ಮಹಿಳೆಯೊಬ್ಬರಿಗೆ ಕೋವಿಡ್-19 ಲಸಿಕೆ ಎರಡನೇ ಡೋಸ್ ನೀಡಿಕೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಬಂದಿದ್ದು, ಆಕೆಯ ಪತಿ ಅದನ್ನು ನೋಡಿ ಆಶ್ಚರ್ಯಕ್ಕೀಡಾಗಿದ್ದಾರೆ.
ಲಾಲೊ ದೇವಿ ಎಂಬುವವರ ಗಂಡ ರಾಮ್ ಉದ್ಗಾರ್ ಎಂಬುವವರು, 'ವೀರಪುರ ವಿಭಾಗದ ಖಾರ್ಮೌಲಿ ಗ್ರಾಮದಲ್ಲಿ ನನ್ನ ಹೆಂಡತಿ ಅನಾರೋಗ್ಯದಿಂದಾಗಿ ಸೆಪ್ಟೆಂಬರ್ 9 ರಂದು ಕೊನೆಯುಸಿರೆಳೆದಿದ್ದಳು.
ನವೆಂಬರ್ 25 ರಂದು ವೀರಪುರದ ಪ್ರಾಥಮಿಕ ಆರೋಗ್ಯ ಕೇಂದ್ರವು ಕಿಸಾನ್ ಭವನದ ಬಳಿ ಕೋವಿಡ್ ಲಸಿಕಾ ಕ್ಯಾಂಪ್ ಅನ್ನು ಆಯೋಜಿಸಿತ್ತು. ಅದಾದ ಬಳಿಕ ಆರೋಗ್ಯ ಅಧಿಕಾರಿಗಳು ಲಾಲೊ ದೇವಿ ಹೆಸರಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್ ಅನ್ನು ನೀಡಿದ್ದಾರೆ.
ಸತ್ತ ವ್ಯಕ್ತಿಯೊಬ್ಬರಿಗೆ ನೀಡಿರುವ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ಬೇಗುಸರಾಯ್ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.
ಬಿಹಾರದಲ್ಲಿ ಕೋವಿಡ್ ಲಸಿಕೆ ನೀಡಿರುವ ಅಂಕಿಅಂಶಗಳನ್ನು ಹೆಚ್ಚಾಗಿ ತೋರಿಸಲು ಮಾಡಿರುವ ಕುತಂತ್ರ ಎಂದು ಹಲವರು ದೂರಿದ್ದಾರೆ.