ಕಾಸರಗೋಡು: ನಾಲ್ಕನೇ ಅಂತಾರಾಷ್ಟ್ರೀಯ ಚಲನಚಿತ್ರ ಮೇಳ(ಕೆಎಫ್‍ಎಫ್-21)ಡಿ. 30ಹಾಗೂ 31ರಂದು ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಕಾಸರಗೋಡ್ ಆದ್ಮಿ'ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಖ್ಯಾತ ಚಿತ್ರ ನಿರ್ದೇಶಕ ಜಿಯೋ ಬೇಬಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಚಿತ್ರ ನಿರ್ದೇಶಕರದ ಶರೀಫ್ ಈಸಾ, ಅನೂಪ್ ಕೆ.ಕೆ, ಶ್ರೀಕೃಷ್ಣನ್ ಕೆ.ಪಿ ಸೇರಿದಂತೆ ಚಲನಚಿತ್ರ ತಂಡದ ಪ್ರಮುಖರು ಚಲನಚಿತ್ರ ಮೇಳದ ವಿವಿಧ ಕಾರ್ಯಾಗಾರಗಳಲ್ಲಿ ಮಾತನಾಡುವರು.
30ರಂದು ಬೆಳಗ್ಗೆ 9ಕ್ಕೆ ಚಲನಚಿತ್ರ ಪ್ರದರ್ಶನದೊಂದಿಗೆ ಮೇಳ ಆರಂಭಗೊಳ್ಳಲಿದೆ. ಆರಂಭದ ದಿನ ನಾಲ್ಕು ಹಾಗೂ ಎರಡನೇ ದಿನ 10 ಸಿನಿಮಾ ಪ್ರದರ್ಶನಗೊಳ್ಳಲಿದೆ. ಸಮಾರೋಪ ಸಮಾರಂಬವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಬಹುಮಾನ ವಿತರಿಸುವರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಚಲನಚಿತ್ರಗಳು ಮೇಲದಲ್ಲಿ ಪ್ರದರ್ಶನಗೊಳ್ಳಲಿರುವುದಾಗಿ ಚಿತ್ರಮೇಳ ವ್ಯವಸ್ಥಾಪಕ ಸಮಿತಿಯ ಪ್ರದೀಪ್ ಜಿ.ಎನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೆ.ಪಿ ಎಸ್ ವಿದ್ಯಾನಗರ್, ಪವೀಶ್ ಕುಮಾರ್, ಅಹ್‍ರಾಸ್ ಅಬೂಬಕ್ಕರ್, ಶಿಹಾಬ್ ಕೆ.ಜೆ, ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.