ತಿರುವನಂತಪುರಂ: ರಾಜ್ಯದಲ್ಲಿ ಇಂದು 3205 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 645, ಎರ್ನಾಕುಳಂ 575, ಕೋಝಿಕ್ಕೋಡ್ 313, ಕೊಟ್ಟಾಯಂ 253, ಕೊಲ್ಲಂ 224, ತ್ರಿಶೂರ್ 194, ಪತ್ತನಂತಿಟ್ಟ 186, ಮಲಪ್ಪುರಂ 181, ಕಣ್ಣೂರು 157, ಆಲಪ್ಪುಳ 136, ಇಡುಕ್ಕಿ 120, ವಯನಾಡ್ 87, ಪಾಲಕ್ಕಾಡ್ 77, ಕಾಸರಗೋಡು 57 ಎಂಬಂತೆ ಸೋಂಕು ದೃಢಪಟ್ಟಿವೆ.
ಕಳೆದ 24 ಗಂಟೆಗಳಲ್ಲಿ 56,388 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ (WIPR) 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,34,146 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,30,126 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 4,020 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. 193 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 27,842 ಕೊರೋನಾ ಪ್ರಕರಣಗಳಲ್ಲಿ, ಕೇವಲ 8.8 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 36 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 347 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 45,538ಕ್ಕೆ ಏರಿಕೆಯಾಗಿದೆ.
ಇಂದು ಕೋವಿಡ್ ಪತ್ತೆಯಾದವರಲ್ಲಿ 10 ಮಂದಿ ಹೊರ ರಾಜ್ಯದವರು. 3036 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 141 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಹದಿನೆಂಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3012 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 782, ಕೊಲ್ಲಂ 123, ಪತ್ತನಂತಿಟ್ಟ 143, ಆಲಪ್ಪುಳ 91, ಕೊಟ್ಟಾಯಂ 131, ಇಡುಕ್ಕಿ 176, ಎರ್ನಾಕುಳಂ 502, ತ್ರಿಶೂರ್ 186, ಪಾಲಕ್ಕಾಡ್ 43, ಮಲಪ್ಪುರಂ 120, ಕೋಝಿಕ್ಕೋಡ್ 349, ವಯನಾಡ್ 83, ಕಣ್ಣೂರು 224, ಕಾಸರಗೋಡು 59 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 27,842 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51,51,715 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.