ನವದೆಹಲಿ: ವಿದೇಶಿ ಉಪಗ್ರಹಗಳ ಉಡಾವಣೆಯಿಂದ ಕಳೆದ ಮೂರು ವರ್ಷಗಳಲ್ಲಿ ಭಾರತವು ಸುಮಾರು 35 ಮಿಲಿಯನ್ ಅಮೆರಿಕಾ ಡಾಲರ್ ಮತ್ತು 10 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ಈ ಮಾಹಿತಿ ನೀಡಿದರು. ಇಸ್ರೋ ತನ್ನ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್ಐಎಲ್) ಮೂಲಕ ವಾಣಿಜ್ಯ ಆಧಾರದ ಮೇಲೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್ಎಲ್ವಿ) ನಲ್ಲಿ ಇತರ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ ಎಂದು ಹೇಳಿದರು.
2021-2023ರ ಅವಧಿಯಲ್ಲಿ ಪಿಎಸ್‌ಎಲ್‌ವಿ ಮೂಲಕ ಬಾಹ್ಯಾಕಾಶಕ್ಕೆ ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲು ನಾಲ್ಕು ದೇಶಗಳ ಗ್ರಾಹಕರೊಂದಿಗೆ ಆರು ಉಡಾವಣಾ ಸೇವಾ ಒಪ್ಪಂದಗಳಿಗೆ ಇಸ್ರೋ ಸಹಿ ಮಾಡಿದೆ ಎಂದು ಅವರು ಮಾಹಿತಿ ನೀಡಿದರು. ವಾಣಿಜ್ಯ ಆಧಾರದ ಮೇಲೆ ಈ ವಿದೇಶಿ ಉಪಗ್ರಹಗಳ ಉಡಾವಣೆಯು ಸುಮಾರು 132 ಮಿಲಿಯನ್ ಯುರೋಗಳಷ್ಟು ಆದಾಯವನ್ನು ಗಳಿಸುತ್ತದೆ.
12 ವಿದ್ಯಾರ್ಥಿ ನಿರ್ಮಿತ ಉಪಗ್ರಹಗಳು ಸೇರಿದಂತೆ ಒಟ್ಟು 124 ಸ್ವದೇಶಿ ಉಪಗ್ರಹಗಳನ್ನು ಭೂ ಕಕ್ಷೆಯಲ್ಲಿ ಇರಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದರು. ಇದಲ್ಲದೆ, 34 ದೇಶಗಳ 342 ವಿದೇಶಿ ಉಪಗ್ರಹಗಳನ್ನು ಸಹ ಸ್ವದೇಶಿ ಉಡಾವಣಾ ವಾಹನಗಳ ಮೂಲಕ ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿ.