ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಂಘದ 40 ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.
ಮಂದಿರದ ಗುರುಸ್ವಾಮಿ ಶ್ರೀ ಕುಞಪ್ಪು ಗುರುಸ್ವಾಮಿ ಯವರ ನೇತೃತ್ವದಲ್ಲಿ ಪ್ರಾತಃಕಾಲ ದೀಪ ಪ್ರತಿಷ್ಠೆ ನಡೆಯಿತು. ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಂತರ ಮಂದಿರದಲ್ಲಿ ಹಲವು ವರ್ಷಗಳಿಂದ ವೈದಿಕ ಕಾರ್ಯಗಳ ನೇತೃತ್ವ ವಹಿಸಿದ ಹಿರಿಯರಾದ ಕಂಬಾರು ಸುಬ್ರಹ್ಮಣ್ಯ ಭಟ್ ಇವರನ್ನು ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಬಿ ಶಂಕರ ದೇವಾಂಗ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಂದಿರದ ಸ್ಥಾಪಕಾಧ್ಯಕ್ಷ ನಾರಾಯಣ ಮಾಸ್ತರ್, ಗೌರವಾಧ್ಯಕ್ಷ ಕೆ. ಮಾನ ಮಾಸ್ತರ್, ಉದ್ಯಮಿ ಗೋಪಾಲ ಪೈ ಬದಿಯಡ್ಕ, ಚುಕ್ಕಿನಡ್ಕ ಮಂದಿರದ ಗುರುಸ್ವಾಮಿ ಶ್ರೀ ಕುಞಕಣ್ಣ ಗುರುಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅನ್ನದಾನ ಕಾರ್ಯಕ್ರಮ ಜರುಗಿತು. ಸಂಜೆ 5 ಕ್ಕೆ ತಾಯಂಬಕ ಬಳಿಕ 7 ಗಂಟೆಗೆ ಶ್ರೀ ಕ್ಷೇತ್ರ ಕಾರ್ಮಾರಿನಿಂದ ಸಾಗಿ ಬಂದ ಆಕರ್ಷಕ ಉಲ್ಪೆ ಮೆರವಣಿಗೆ ಮಂದಿರ ತಲುಪಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಈ ಸಂಧರ್ಭದಲ್ಲಿ ಮಂದಿರಕ್ಕೆ ಆಗಮಿಸಿದರು. ಶ್ರೀಗಳನ್ನು ಮಂದಿರದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮಹಾಪೂಜೆಯ ಬಳಿಕ ಭಕ್ತಹಾದಿಗಳಿಗೆ ಶ್ರೀಗಳು ಮಂತ್ರಕ್ಷತೆ ಫಲ ವನಿತ್ತು ಹರಸಿದರು.
ಈ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ನೀಡಿದ ಕಲಾಪೆÇೀಷಕ ಡಾ.ಟಿ ಶ್ಯಾಮ್ ಭಟ್ ಅವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹನುಮಗಿರಿ ಮೇಳ ದವರಿಂದ " ಧಕ್ಷಾಧ್ವರ- ಮಾರಣಾಧ್ವರ- ಮೀನಾಕ್ಷಿ ಕಲ್ಯಾಣ " ಯಕ್ಷಗಾನ ಬಯಲಾಟ ಜರಗಿತು.