ಮಹಾರಾಷ್ಟ್ರದಲ್ಲಿ 108 ಪ್ರಕರಣಗಳು ಪತ್ತೆಯಾಗಿದ್ದು, ದಿನೇ ದಿನೇ ಹೆಚ್ಚಳ ಕಾಣುತ್ತಲೇ ಇದೆ. ಇನ್ನು ನವದೆಹಲಿ 79, ಗುಜರಾತ್ 43, ತೆಲಂಗಾಣ 38, ಕೇರಳ 37, ತಮಿಳುನಾಡಿನಲ್ಲಿ 34, ಕರ್ನಾಟಕ 31, ರಾಜಸ್ಥಾನ 22, ಉತ್ತರಖಂಡ್, ಲಡಾಕ್, ಚಂಡೀಗಡದಲ್ಲಿ ತಲಾ 1, ಉತ್ತರಪ್ರದೇಶದಲ್ಲಿ 2, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ತಲಾ 3, ಆಂಧ್ರಪ್ರದೇಶ, ಹರಿಯಾಣ, ಒಡಿಶಾದಲ್ಲಿ ತಲಾ 4 ಪ್ರಕರಣಗಳು ಪತ್ತೆಯಾಗಿವೆ.
ಓಮೈಕ್ರಾನ್‍ಗೆ ಜಾಗತಿಕ ಮಟ್ಟದಲ್ಲಿ ತುತ್ತಾದವರಲ್ಲಿ 10 ಮಂದಿಯಲ್ಲಿ ಒಂಭತ್ತು ಮಂದಿ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು. ಆದ್ದರಿಂದ ಜನರು ಕೋವಿಡ್ ಮಾರ್ಗಸೂಚಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆಯನ್ನು ಮುಂದುವರೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇನ್ನು ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ರಾತ್ರಿ ಕಫ್ರ್ಯೂ ವಿಧಿಸಲಾಗಿದೆ.