ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ 42ನೇ ವಾರ್ಷಿಕೋತ್ಸವ ಡಿ.28ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಪ್ರಾತಃಕಾಲ 6 ಗಂಟೆಗೆ ಗಣಪತಿ ಹೋಮ, ದೀಪ ಪ್ರತಿಷ್ಠೆ, 7 ಗಂಟೆಯಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ಶರಣಂ ವಿಳಿ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಜರಗಲಿದೆ. ಸಂಜೆ 6.15ಕ್ಕೆ ದೀಪಾರಾಧನೆ, ವಿವಿಧ ಭಜನಾ ಸಂಘಗಳಿಂದ ಭಜನೆ, 7 ಗಂಟೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಹೊರಟು ಶ್ರೀಮಂದಿರಕ್ಕೆ ಉಲ್ಪೆ ಮೆರವಣಿಗೆ, ಮಂಗಳಾರತಿ, ಪ್ರಸಾದ ವಿತರಣೆ, 9.30ರಿಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಗುರು ಸಬ್ಬಣಕೋಡಿ ರಾಮ ಭಟ್ ಇವರ ನಿರ್ದೇಶನದಲ್ಲಿ ಶ್ರೀ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ, ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಪುರಸ್ಕøತ ಕೇಂದ್ರದ ಕಲಾವಿದರು ಮತ್ತು ವೃತ್ತಿಪರ ಮೇಳದ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.