ತಿರುವನಂತಪುರ: ರಾಜ್ಯದಲ್ಲಿ ವೇತನ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ನೌಕರರು ನಡೆಸಿದ ಮುಷ್ಕರದಿಂದ ಕೆ ಎಸ್ ಆರ್ ಟಿ ಸಿ ಗೆ ನಿತ್ಯ 3.5 ಕೋಟಿಯಿಂದ 4 ಕೋಟಿ ರೂಪಾಯಿ ನಷ್ಟವಾಗುತ್ತಿದೆ.
ಇದೇ ವೇಳೆ ಸೋಮವಾರದಿಂದಲೇ ಸಂಬಳ ನೀಡಬೇಕು, ನೌಕರರು ಮುಷ್ಕರದಿಂದ ಹಿಂದೆ ಸರಿಯಬೇಕು, ಸೇವೆಗೆ ಅಡ್ಡಿಯಾಗಬಾರದು ಎಂದು ಸಿಎಂಡಿ ಮನವಿ ಮಾಡಿದರು.
ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಮಯವಾಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಕೆ ಎಸ್ ಆರ್ ಟಿ ಸಿಯನ್ನು ಅವಲಂಬಿಸುವ ಸಾಧ್ಯತೆಯಿದೆ.