HEALTH TIPS

ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಪೂರ್ಣ ಲಸಿಕೆ; ಒಟ್ಟು 127.61 ಕೋಟಿ ಲಸಿಕೆ ನೀಡಿಕೆ

          ನವದೆಹಲಿ: ಭಾರತದ ಅರ್ಹ ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಕೋವಿಡ್-19 ಲಸಿಕೆಯನ್ನು ಪೂರ್ಣಪ್ರಮಾಣದಲ್ಲಿ (2 ಡೋಸ್) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ. 

                  ಒಟ್ಟು ಲಸಿಕೆ ನೀಡಿರುವ ಸಂಖ್ಯೆ 127.61 ಕೋಟಿಯನ್ನು ದಾಟಿದ್ದು, ಈ ಮೂಲಕ ಭಾರತದಲ್ಲಿ ಮೊದಲ ಡೋಸ್ ಲಸಿಕೆಯನ್ನು ಶೇ.84.8 ರಷ್ಟು ವಯಸ್ಕ ಮಂದಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
 
              ಅಭಿನಂದನೆಗಳು ಭಾರತ. ದೇಶದ ಅರ್ಧದಷ್ಟು ಅರ್ಹ ಜನಸಂಖ್ಯೆಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಜೊತೆಯಾಗಿ ಜಯಗಳಿಸುತ್ತೇವೆ ಎಂದು ಟ್ವೀಟ್ ನಲ್ಲಿ ಮಾಂಡವೀಯ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries