ನವದೆಹಲಿ: 'ಆಭರಣ ಮತ್ತು ಬಣ್ಣದ ರತ್ನದ ಕಲ್ಲುಗಳ ತಯಾರಿಕೆ ಹಾಗೂ ರಫ್ತಿನಲ್ಲಿ ತೊಡಗಿರುವ ಜೈಪುರ ಜುವೆಲ್ಲರಿ, ಜೆಮ್ಸ್ ಸಮೂಹದ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ನಡೆಸಿದ ದಾಳಿಯಲ್ಲಿ ಲೆಕ್ಕಕ್ಕೆ ಸಿಗದ 500 ಕೋಟಿಗೂ ಹೆಚ್ಚಿನ ಆದಾಯ ಪತ್ತೆಯಾಗಿದೆ' ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬುಧವಾರ ತಿಳಿಸಿದೆ.
ದಾಳಿಯ ಸಮಯದಲ್ಲಿ ಇಲಾಖೆಯು 4 ಕೋಟಿ ನಗದು ಹಾಗೂ 9 ಕೋಟಿ ಮೌಲ್ಯದ ಚಿನ್ನಾಭರಣವನ್ನೂ ವಶಪಡಿಸಿಕೊಂಡಿದೆ.
ನ. 23ರಿಂದ ಶುರುವಾಗಿದ್ದ ದಾಳಿಯಲ್ಲಿ ಇಲಾಖೆಯು ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
'ಇಲ್ಲಿಯವರೆಗೆ 72 ಕೋಟಿಯನ್ನು ಮಾತ್ರ ಗುಂಪು ಘಟಕಗಳು ತಮ್ಮ ಬಹಿರಂಗಪಡಿಸದ ಆದಾಯವೆಂದು ಒಪ್ಪಿಕೊಂಡಿವೆ' ಎಂದು ಸಿಬಿಡಿಟಿ ತಿಳಿಸಿದೆ.