ಆಲಪ್ಪುಳ: ಅಲಪ್ಪುಳದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಇದುವರೆಗೆ 50 ಮಂದಿಯನ್ನು ಬಂಧಿಸಲಾಗಿದೆ ಎಂದು ಐಜಿ ಹರ್ಷಿತಾ ಅಟ್ಟಲ್ಲೂರಿ ತಿಳಿಸಿದ್ದಾರೆ. ಎಷ್ಟೇ ದೊಡ್ಡ ನಾಯಕರಾದರೂ ಬಂಧನ ನಿಶ್ಚಿತ. ಇದೀಗ ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಇವರೇನೂ ಆರೋಪಿಗಳಲ್ಲ. ಎರಡೂ ಕಡೆಯವರು ಬಂಧನದಲ್ಲಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಇನ್ನಷ್ಟು ಬಂಧನ ನಡೆಯಲಿದೆ ಎಂದು ಹರ್ಷಿತಾ ಹೇಳಿದ್ದಾರೆ.
ಪೋಲೀಸರಿಂದ ಯಾವುದೇ ಲೋಪವಾಗಿಲ್ಲ ಎಂದು ಹರ್ಷಿತಾ ಹೇಳಿದ್ದಾರೆ. ಪ್ರತಿ ಮನೆಗೂ ರಕ್ಷಣೆ ನೀಡಲು ಸಾಧ್ಯವಿಲ್ಲ. ಪೊಲೀಸರ ಮೇಲೆ ಒತ್ತಡ ಹೇರುವುದು ತನಿಖೆಯ ಮೇಲೂ ಪರಿಣಾಮ ಬೀರುತ್ತದೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಇದು ಅತ್ಯಂತ ಗಂಭೀರವಾದ ವಿಷವಾಗಿದ್ದು, ಕಾನೂನು ಕೈಗೆತ್ತಿಕೊಳ್ಳುವವರ ಉಳಿದ ಜೀವನವನ್ನು ಜೈಲಿನಲ್ಲಿಯೇ ಕಳೆಯಬೇಕಾಗುತ್ತದೆ ಎಂದು ಹರ್ಷಿತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಮತ್ತು ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಹತ್ಯೆಯಾಗಿದ್ದರು. ಅಪರಿಚಿತ ಗುಂಪು ಎಸ್‍ಡಿಪಿಐ ಕಾರ್ಯಕರ್ತನನ್ನು ಕೊಂದ ನಂತರ ರಂಜಿತ್‍ನ ಕೊಲೆಯಾಗಿದೆ. ಜನರ ಗುಂಪೆÇಂದು ಮನೆಗೆ ನುಗ್ಗಿ ರಂಜಿತ್ ಮೇಲೆ ಹಲ್ಲೆ ನಡೆಸಿದೆ. ಈ ಹತ್ಯೆಯ ಹಿಂದೆ ಪಾಪ್ಯುಲರ್ ಫ್ರಂಟ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.