ತಿರುವನಂತಪುರ: ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಹುಟ್ಟಿಸುವ ಸಂದೇಶಗಳನ್ನು ಹರಡಿದ ಆರೋಪದ ಮೇಲೆ ರಾಜ್ಯದಲ್ಲಿ 51 ಪ್ರಕರಣಗಳು ದಾಖಲಾಗಿವೆ. ಕಳೆದ ಆರು ದಿನಗಳನ್ನು ಇಷ್ಟೊಂದು ದೂರುಗಳು ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಎರ್ನಾಕುಳಂ ಗ್ರಾಮಾಂತರ ಪೋಲೀಸ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಗ್ರಾಮಾಂತರ ಪೋಲೀಸ್ ವ್ಯಾಪ್ತಿಯಲ್ಲಿ 14 ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂನಲ್ಲಿ 12 ಪ್ರಕರಣಗಳು ದಾಖಲಾಗಿವೆ. ನಿನ್ನೆ ಯಾವ ದೂರುಗಳೂ ಬಂದಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ಇತರ ಜಿಲ್ಲೆಗಳೆಂದರೆ ತಿರುವನಂತಪುರಂ ನಗರ ಒಂದು, ತಿರುವನಂತಪುರಂ ಗ್ರಾಮಾಂತರ ನಾಲ್ಕು, ಕೊಲ್ಲಂ ನಗರ ಒಂದು, ಪತ್ತನಂತಿಟ್ಟ ಒಂದು, ಆಲಪ್ಪುಳ ಎರಡು, ಕೊಟ್ಟಾಯಂ ಒಂದು, ತ್ರಿಶೂರ್ ನಗರ ನಾಲ್ಕು, ತ್ರಿಶೂರ್ ಗ್ರಾಮಾಂತರ ಒಂದು, ಪಾಲಕ್ಕಾಡ್ ಐದು, ಕೋಝಿಕ್ಕೋಡ್ ಗ್ರಾಮಾಂತರ ಎರಡು, ಕಣ್ಣೂರು ಗ್ರಾಮಾಂತರ ಒಂದು ಮತ್ತು ಕಾಸರಗೋಡು ಎರಡು.
ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ದ್ವೇಷ ಮತ್ತು ಮತೀಯವಾದವನ್ನು ಬೆಳೆಸುವ ರೀತಿಯಲ್ಲಿ ಹರಡುವ ಸಂದೇಶಗಳ ಮೇಲೆ ನಿಗಾ ಇಡಲು ಮತ್ತು ಆರೋಪಿಗಳ ಪತ್ತೆಗೆ ಪೋಲೀಸರು ವಿಶೇಷ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಇಂತಹ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಬಂಧನ ಸೇರಿದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಪೋಲೀಸ್ ವರಿಷ್ಠ ಅನಿಲ್ ಕಾಂತ್ ಅವರು ಎಲ್ಲಾ ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದರು.
ಈ ಹಿಂದೆ ಮಾನವ ಹಕ್ಕುಗಳ ಆಯೋಗವು ಈ ಸಂಬಂಧ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ಆದೇಶ ಹೊರಡಿಸಿತ್ತು.