ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಶೀಘ್ರದಲ್ಲೇ ಐದು ಎಥೆನಾಲ್ ಡಿಸ್ಟಿಲರಿಗಳು ಪ್ರಾರಂಭವಾಗಲಿದೆ. ನಾಲ್ಕು ಘಟಕಗಳಿಗೆ ಪರವಾನಗಿ ನೀಡಲಾಗಿದ್ದು ಇನ್ನೊಂದು ಮಂಜುರಾತಿಗೆ ಆಗಬೇಕಿದೆ.
ಇದರೊಂದಿಗೆ ಎಂಟು ಎಥೆನಾಲ್ ಡಿಸ್ಟಿಲರಿ ಘಟಕಗಳನ್ನು ಮುಜಾಫರ್‌ನಗರ ಹೊಂದಲಿದೆ.
ಜಿಲ್ಲೆಯಲ್ಲಿ ಈಗಾಗಲೇ ಮೂರು ಎಥೆನಾಲ್ ಡಿಸ್ಟಿಲರಿಗಳು 2020-21ರಲ್ಲಿ 6.73 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಿವೆ. ಅಧಿಕಾರಿಗಳು ಪ್ರಕಾರ ಒಂದು ವರ್ಷದಲ್ಲಿ 10.97 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
ಜಿಲ್ಲಾ ಅಬಕಾರಿ ಅಧಿಕಾರಿ ಉದಯ್ ಪ್ರಕಾಶ್ ಸಿಂಗ್ ಮಾತನಾಡಿ, 'ತಮ್ಮ ಇಲಾಖೆಯು ನಾಲ್ಕು ಹೊಸ ಎಥೆನಾಲ್ ಡಿಸ್ಟಿಲರಿಗಳಿಗೆ ಪರವಾನಗಿ ನೀಡಿದೆ. ಇನ್ನೊಂದು ಘಟಕಕ್ಕೆ ಪರವಾನಗಿ ಮಂಜೂರಾತಿ ಸಧ್ಯದಲ್ಲಿ ಆಗಲಿದೆ' ಎಂದರು.
ಐವರು ಕೈಗಾರಿಕೋದ್ಯಮಿಗಳು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. 500 ಕೋಟಿ ಹೂಡಿಕೆಯಿಂದ ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಿಸಲು ನೆರವಾಗಲಿದೆ ಎಂದು ಅವರು ಹೇಳಿದರು.