HEALTH TIPS

ನೆಕ್ರಾಜೆ ಶ್ರೀಸಂತಾನ ಗೋಪಾಲಕೃಷ್ಣ ಕ್ಷೇತ್ರ: ಡಿ.5 ರಂದು ನಿಧಿ ಸಮರ್ಪಣೆ

                                                    

              ಮುಳ್ಳೇರಿಯ : ಕಾಸರಗೋಡು ತಾಲೂಕಿನ ನೆಕ್ರಾಜೆ ಗ್ರಾಮ ಅತೀ ಪುರಾತನ ಕ್ಷೇತ್ರವಾದ ಶ್ರೀ ಸಂತಾನ ಗೋಪಾಲಕೃಷ್ಣ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಭಕ್ತ ಮಹಾಶಯರ ಸಹಕಾರದಿಂದ ಭರದಿಂದ ಸಾಗುತ್ತಿದ್ದು, ವಿಗ್ರಹ ನಿರ್ಮಾಣ ನಿಧಿ ಸಮರ್ಪಣಾ ದಿನವನ್ನಾಗಿ ಡಿ.5ರಂದು ಶ್ರೀಕ್ಷೇತ್ರದಲ್ಲಿ ನಡೆಯಲಿದೆ.

ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ನೂತನ ಶಿಲಾಮಯ ಗರ್ಭಗುಡಿ ಹಾಗೂ ನೂತನ ಕೃಷ್ಣ ಶಿಲಾ ವಿಗ್ರಹವನ್ನು ನಿರ್ಮಿಸಿ ಪುನಃ ಪ್ರತಿಷ್ಠಾಪಿಸಬೇಕಾಗಿದೆ. ಇದಕ್ಕಾಗಿ ನೆಕ್ರಾಜೆ ಗ್ರಾಮದ ಪ್ರತಿಯೋರ್ವ ಭಗವದ್ ಭಕ್ತ ಹಾಗೂ ಊರ, ಪರವೂರ ಭಕ್ತ ಬಾಂಧವರು ನಿಧಿ ಸಮರ್ಪಣೆ ಮಾಡಿ ಸಂಪ್ರಾರ್ಥನೆಯನ್ನು ನಡೆಸಬೇಕಾಗಿದೆ. 

ಡಿ.5ರಂದು ನಡೆಯುವ ವಿಗ್ರಹ ನಿರ್ಮಾಣ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಪೂರ್ವಾಹ್ನ 11ಗಂಟೆಗೆ ಎಡನೀರು ಮಠಾಧೀಶರಾದ ಶ್ರೀ  ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ.  ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿಯವರು ಬ್ರಹ್ಮಕಲಶೋತ್ಸವದ ದಿನಾಂಕವನ್ನು ಘೋಷಿಸಲಿದ್ದಾರೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡಲಿದ್ದಾಋಎ. ಊರ ಪರವೂರ ಗಣ್ಯ ವ್ಯಕ್ತಿಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಮಹಾಜನರು ಪಾಲ್ಗೊಳ್ಳಬೇಕೆಂದೂ ನೆಕ್ರಾಜೆ ಗ್ರಾಮದ ಪ್ರತಿಯೋರ್ವ ಭಗವದ್ ಭಕ್ತ ಹಾಗೂ ಊರ, ಪರವೂರ ಭಕ್ತ ಬಾಂಧವರು ನಿಧಿ ಸಮರ್ಪಣೆ ಮಾಡಿ  ಶ್ರೀ ದೇವರ ಕೃಪೆಗೆಪಾತ್ರರಾಗಬೇಕೆಂದು ಕ್ಷೇತ್ರದ ಪ್ರಕಟನೆಯು ತಿಳಿಸಿದೆ.


................

                  ಮಾಹಿತಿ:

        ಚೆಂಗಳ ಗ್ರಾಮ ಪಂಚಾಯತು ವ್ಯಾಪ್ತಿಯ ನೆಕ್ರಾಜೆಯು ಒಂದು ಸುಂದರ ಗ್ರಾಮ ಪ್ರದೇಶ. ಈ ಗ್ರಾಮದ ಜನರಿಗೆ ಆರಾಧ್ಯ ದೇವರಾಗಿ ಶ್ರೀ ಸಂತಾನ ಗೋಪಾಲಕೃಷ್ಣ ಸ್ವಾಮಿಯೂ ಇಲ್ಲಿಯ ಪುರಾತನವಾದ ದೇಗುಲದಲ್ಲಿ ನೆಲೆನಿಂತಿದ್ದು, ಸಕಲ ಇಷ್ಟಾರ್ಥಗಳನ್ನೂ, ಪ್ರಾರ್ಥನೆಗಳನ್ನೂ ಸಿದ್ಧಿಸಿಕೊಡುತ್ತಿರುವುದು ಭಕ್ತ ಜನರ ಪಾಲಿನ ಸೌಭಾಗ್ಯವೇ ಸರಿ. ಇಲ್ಲಿನ ಶ್ರೀ ಸಂತಾನ ಗೋಪಾಲಕೃಷ್ಣ ದೇವಾಲಯವು ಸೀಮೆಯ ಒಂದು ಪ್ರಸಿದ್ಧ ಕಾರಣಿಕದ ಕ್ಷೇತ್ರವಾಗಿದ್ದು, ನೆಕ್ರಾಜೆ ಗ್ರಾಮಸ್ಥರ ಗ್ರಾಮ ದೇಗುಲವೆಂದೇ ಪ್ರತೀತವಾಗಿದೆ. ನೆಕ್ರಾಜೆ ಗೌರವಸ್ಥ ಬಂಟ ಸಮುದಾಯದವರ ಕುಟುಂಬಸ್ಥರು ಅನುವಂಶಿಕ ಮೊಕ್ತೇಸರರಾಗಿರುತ್ತಾರೆ. ಈ ಕ್ಷೇತ್ರದ ನಿತ್ಯ ನೈಮಿತ್ತಿಕ, ತ್ರಿಕಾಲ ಪೂಜೆ, ಪರ್ವ ದಿನಗಳಲ್ಲಿ ವಿಶೇಷ ಸೇವಾ ಪೂಜೆ, ತಿಂಗಳ ಮೊದಲ ಆದಿತ್ಯವಾರ ಬಲಿವಾಡು ಕೂಟ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಾರ್ಷಿಕ ಜಾತ್ರೆಗಳನ್ನು ಕ್ಷೇತ್ರದ ತಂತ್ರಿವರ್ಯರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಆವ್ಯಾಹಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ತಾಂತ್ರಿಕ ವಿಧಿ ವಿಧಾನಗಳಲ್ಲದೆ ಭಜನೆ, ಪೂಜೆ, ಸೇವಾದಿಗಳೂ, ಭಕ್ತ ಜನರು ಹರಕೆಗಳನ್ನೂ ದೇವರಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಿ ತಮ್ಮ ಮನೋಕಾಮನೆಗಳನ್ನು ಪಡಕೊಳ್ಳುತ್ತಿದ್ದಾರೆ. ಅಲ್ಲದೆ ಕ್ಷೇತ್ರಕ್ಕೆ ಸಂಬಂಧಪಟ್ಟ ಶ್ರೀ ವಿಷ್ಣುಮೂರ್ತಿ, ಪಳ್ಳಧೂಮಾವತಿ ದೈವಗಳ ಕೋಲ ಆರಾಧನೆಯನ್ನೂ ವಾರ್ಷಿಕ ಜಾತ್ರೆಯ ಸಂದರ್ಭಗಳಲ್ಲಿ ನಡೆಸಲಾಗುತ್ತದೆ. ಕ್ಷೇತ್ರದ ಪರಿಸರದಲ್ಲಿ ಶ್ರೀ ವನ ಶಾಸ್ತಾವು ಹಾಗೂ ಶ್ರೀ ಕ್ಷೇತ್ರದ ಬಲಭಾಗದಲ್ಲಿ ಶ್ರೀ ದೇವಿ ಕ್ಷೇತ್ರವು ನೆಲೆ ನಿಂತಿರುವುದು ಇಲ್ಲಿನ ವಿಶೇಷತೆಯಾಗಿದೆ. ಶ್ರೀ ಸಂತಾನ ಗೋಪಾಲಕೃಷ್ಣನಿಗೆ ಕಾರ್ತಿಕ ಪೂಜೆ, ಹಾಲು ಪಾಯನ ಪ್ರಧಾನ ಸೇವೆಗಳಾಗಿವೆ. 

   ಈ ಹಿಂದೆ 2001ರಲ್ಲಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಬ್ರಹ್ಮ ಶ್ರೀ ವೇದಮೂರ್ತಿ ಬಾಲಕೃಷ್ಣ ತಂತ್ರಿ ದೇಲಂಪಾಡಿ ಇದರ ತಾಂತ್ರಿಕ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆದಿದ್ದು, ಭಕ್ತ ಮಹಾಜನರು ತಮ್ಮ ಮನದಾಸೆಗಳನ್ನು ತೀರಿಸಿ ಸಂತೃಪ್ತರಾಗಿದ್ದರು. 

ಪ್ರಸ್ತುತ ದೇವಸ್ಥಾನದ ಜೀರ್ಣೋದ್ಧಾರ ನಡೆಸುವರೇ ದೈವಜ್ಞರ ಮುಖಾಂತರ ಚಿಂತನೆ ನಡೆದು, ನೂತನ ಶ್ರೀ ದೇವರ ವಿಗ್ರಹವನ್ನು ರಚಿಸಿ, ನೂತನ ಗರ್ಭಗುಡಿ, ನಮಸ್ಕಾರ ಮಂಟಪದ ನವೀಕರಣ, ಸುತ್ತು ಪೌಳಿ ಹಾಗೂ ಗೋಪುರಗಳನ್ನು ದುರಸ್ಥಿಗೊಳಿಸಿ, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಶೀಘ್ರ ನೆರವೇರಿಸಬೇಕಾಗಿ ಕಂಡುಬಂದಿರುತ್ತದೆ. 

ಇದರೊಂದಿಗೆ ಶ್ರೀ ದೇವರ ದರ್ಶನಕ್ಕೆ ಬರುವಂತಹ ಭಕ್ತಾದಿಗಳಿಗೆ ಹೆಚ್ಚಿನ ಸೌಕರ್ಯವೊದಗಿಸಲು ಸುತ್ತಲೂ ಶಾಶ್ವತ ಚಪ್ಪರ, ಸುಸಜ್ಜಿತ ಅಡುಗೆಶಾಲೆ, ನೆಲಕ್ಕೆ ಹಾಸುಗಲ್ಲು, ಕಾರ್ಯಾಲಯ, ಶಾಶ್ವತ ವೇದಿಕೆ, ನೀರಿನ ಟ್ಯಾಂಕ್, ಶೌಚಾಲಯ ಮುಂತಾದ ಕಾಮಗಾರಿಗಳನ್ನು ನಡೆಸಬೇಕಾಗಿರುವುದರಿಂದ, ಮೂರು ವರ್ಷದ ಹಿಂದೆ ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಅನುಗ್ರಹದೊಂದಿಗೆ ದೇಗುಲ ನವೀಕರಣ ಸಮಿತಿಯನ್ನು ರಚಿಸಲಾಗಿತ್ತು. 

ನಿಯೋಜಿಸಿದ ಅಭಿವೃದ್ಧಿ ಕಾರ್ಯಗಳು ಅತೀ ಶೀಘ್ರವಾಗಿ ನಡೆಸಲು ಊರ ಪರವೂರ ಭಗವದ್ಭಕ್ತ ಮಹಾಜನರು ಸಹಕರಿಸಬೇಕೆಂದು ಕ್ಷೇತ್ರದ ಪ್ರಕಟನೆಯು ವಿನಂತಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries