ಕಾಸರಗೋಡು: ಪಾಣಾರ್ ಕುಳಂ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ, ಫಾತಿಮಾ ರಿಸಾಳ 6 ನೇ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಕಾಸರಗೋಡು ಬಿ.ಆರ್.ಸಿ. ಸದಸ್ಯರು ನಡೆಸಿದ್ದಾರೆ.
ವಿಶ್ವ ವಿಶೇಷಚೇತನರ ದಿನಾಚರಣೆಯನ್ನು ಈ ರೀತಿ ಇಲ್ಲಿ ಆಚರಿಸಲಾಯಿತು. "ಚಂuಟಿಜeಜಿiಟಿeಜದಿಕೂಟಂ(ಗೆಳೆಯರ ಗಡಣ)" ಎಂಬ ಹೆಸರಿನಲ್ಲಿ ಕಾಸರಗೋಡು ಬಿ.ಆರ್.ಸಿ. ಆಯೋಜಿಸಿದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಿಸಾಳ ಹುಟ್ಟುಹಬ್ಬವೂ ಸೇರಿತ್ತು.
ಎಸ್.ಎಸ್.ಕೆ.ಕಾಸರಗೋಡು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ನಾರಾಯಣನ್, ಕಾಸರಗೋಡು ಬ್ಲೋಕ್ ಕಾರ್ಯಕ್ರಮ ಸಂಚಾಲಕ ಪ್ರಕಾಶನ್, ವಾರ್ಡ್ ಸದಸ್ಯೆ ಫಾಯಿಸಾ ನೌಷಾದ್, ಐ.ಇ.ಡಿ.ಸಿ. ಸಂಪನ್ಮೂಲ ವ್ಯಕ್ತಿಗಳಾದ ಸಿಂಧು, ಷೀನಾದಾಸ್, ಅರ್ಚನಾ, ಬಿ.ಆರ್.ಸಿ. ಸಂಚಾಲಕ ಸುಧೀಶ್, ಶಿಕ್ಷಕಿಯರಾದ ಬೀನಾ, ಒಂದನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.