ಕೊಚ್ಚಿ: ಶಬರಿಮಲೆ ಯಾತ್ರೆಗೆ ಹೆಚ್ಚಿನ ರಿಯಾಯಿತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ 60,000 ಕ್ಕೆ ಹೆಚ್ಚಿಸಲಾಗುವುದು. ಸ್ಪಾಟ್ ಬುಕಿಂಗ್ 5,000ಕ್ಕೆ ಏರಿಕೆಯಾಗಿದೆ. ಸೋಮವಾರದಿಂದ ಎಂದಿನಂತೆ ತುಪ್ಪಾಭಿಷೇಕ ನಡೆಯಲಿದೆ.
ಮೂಲ ಸೌಕರ್ಯ ಖಾತ್ರಿಪಡಿಸಿ ಕರಿಮಲ ರಸ್ತೆ ತೆರೆಯಲು ಅನುಮತಿ ನೀಡಲಾಗಿದೆ. ಯಾತ್ರಾರ್ಥಿಗಳ ಮೇಲಿನ ನಿಯಂತ್ರಣಗಳನ್ನು ಮನ್ನಾ ಮಾಡಬೇಕೆಂಬ ದೇವಸ್ವಂ ಮಂಡಳಿಯ ಮನವಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ.
ಇದೇ ವೇಳೆ ಶಬರಿಮಲೆ ಸನ್ನಿಧಿಯ ಆದಾಯ 50 ಕೋಟಿ ದಾಟಿದೆ. ದೇವಸ್ವಂ ಬೋರ್ಡ್ ಪ್ರಕಾರ, ಅರವಣ ಮಾರಾಟದಿಂದ ಹೆಚ್ಚಿನ ಆದಾಯವನ್ನು ಗಳಿಸಲಾಗಿದೆ.