ವಾಷಿಂಗ್ ಟನ್: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯಲ್ಲಿ ಭಾರತೀಯ ಮೂಲದ 66 ಮಂದಿ ಇದ್ದಾರೆ ಎಂದು ಅಮೆರಿಕದ ಸರ್ಕಾರಿ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಭಯೋತ್ಪಾದಕ ಶಕ್ತಿಗಳನ್ನು ಸಕ್ರಿಯಾವಾಗಿ ಪತ್ತೆ ಮಾಡಿ ನಾಶ ಮಾಡುತ್ತಿರುವ ಎನ್ಐಎ ಸೇರಿದಂತೆ ಭಾರತದ ಭಯೋತ್ಪಾದನಾ ನಿಗ್ರಹ ಪಡೆಗಳ ಶ್ರಮವನ್ನು ಅಮೆರಿಕ ಮೆಚ್ಚುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.
ವಿವಿಧ ದೇಶಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ 2020 ನೇ ಸಾಲಿನ ವರದಿಗಳನ್ನು ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟೋನಿ ಬ್ಲಿನ್ಕೆನ್ ಪ್ರಕಟಿಸಿದ್ದು, UNSCR 2309 ಅನ್ನು ಕಾರ್ಯಗತಗೊಳಿಸುವುದಕ್ಕೆ ಹಾಗೂ ವಿಮಾನ ನಿಲ್ದಾಣದ ಸ್ಥಳಗಳಲ್ಲಿ ಕಾರ್ಗೋ ಸ್ಕ್ರೀನಿಂಗ್‌ಗಾಗಿ ಡ್ಯುಯಲ್-ಸ್ಕ್ರೀನ್ ಎಕ್ಸ್-ರೇ ಆದೇಶದ ಅನುಸರಣೆಯನ್ನು ಜಾರಿಗೊಳಿಸುವುದಕ್ಕೆ ಭಾರತದೊಂದಿಗೆ ಸಹಯೋಗ ನೀಡುತ್ತಿದೆ ಎಂದು ಹೇಳಿದ್ದಾರೆ.
ನವೆಂಬರ್ ತಿಂಗಳವರೆಗೆ ಗುರುತಿಸಲ್ಪಟ್ಟ 66 ಭಾರತೀಯ ಮೂಲದ ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ವಿದೇಶದಿಂದ ಭಯೋತ್ಪಾದಕ ಫೈಟರ್ (ಎಫ್ ಟಿಎಫ್) ಗಳನ್ನು ಭಾರತಕ್ಕೆ 2020 ರಲ್ಲಿ ಕಳಿಸಲಾಗಿಲ್ಲ ಎಂದು ಅಮೆರಿಕ ತನ್ನ ವರದಿಯಲ್ಲಿ ತಿಳಿಸಿದೆ.