ನವದೆಹಲಿ:ಸರಕಾರಿ ಸೇವೆಗೆ ಸೇರಿದ 6 ತಿಂಗಳಲ್ಲಿ ಉದ್ಯೋಗಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ ಖಾತರಿ ನೀಡಲು ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಬಲವಾಗಿ ಶಿಫಾರಸು ಮಾಡಿದೆ.
ನವದೆಹಲಿ:ಸರಕಾರಿ ಸೇವೆಗೆ ಸೇರಿದ 6 ತಿಂಗಳಲ್ಲಿ ಉದ್ಯೋಗಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ ಖಾತರಿ ನೀಡಲು ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಸರಕಾರಕ್ಕೆ ಸಂಸದೀಯ ಸಮಿತಿ ಬಲವಾಗಿ ಶಿಫಾರಸು ಮಾಡಿದೆ.
ಜಾತಿ ಪ್ರಮಾಣ ಪತ್ರವನ್ನು ಸಮಯ ಮಿತಿಯ ಒಳಗಡೆ ಪರಿಶೀಲನೆ ನಡೆಸಲು ಸಿಬ್ಬಂದಿ ಹಾಗೂ ತರಬೇತು ಇಲಾಖೆ ರಾಜ್ಯ ಸರಕಾರದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಿರುವ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ವ್ಯಕ್ತಿ ಉದ್ಯೋಗಕ್ಕೆ ಸೇರಿದ 6 ತಿಂಗಳ ಒಳಗೆ ಜಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ನಡೆಸಬೇಕು ಎಂದು ಎಲ್ಲ ಸಾರ್ವಜನಿಕ ರಂಗದ ವಲಯಗಳು / ಸಂಸ್ಥೆಗಳು/ ಸಾರ್ವಜನಿಕ ರಂಗದ ಬ್ಯಾಂಕ್ಗಳಿಗೆ ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ (ಪಿಂಚಣಿಗಳು ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ) ಸಚಿವಾಲಯ ಸ್ಪಷ್ಟ ಮಾರ್ಗಸೂಚಿ ನೀಡಬೇಕು ಎಂದು ಲೋಕಸಭೆಯಲ್ಲಿ ಸೋಮವಾರ ಮಂಡಿಸಿದ ವರದಿಯಲ್ಲಿ ಸಮಿತಿ ಸ್ಪಷ್ಟವಾಗಿ ಹೇಳಿದೆ.
ಉದ್ಯೋಗಿಯ ಉದ್ಯೋಗ ದೃಢೀಕರಣದ ಮೊದಲು ಅಥವಾ ಕನಿಷ್ಠ 6 ತಿಂಗಳ ಒಳಗೆ ಪ್ರಮಾಣ ಪತ್ರಗಳ ಅಧಿಕೃತತೆಯನ್ನು ಪರಿಶೀಲಿಸುವಂತೆ ಪ್ರಮಾಣ ಪತ್ರ ನೀಡಿದ ಸಂಸ್ಥೆಗೆ ರಾಜ್ಯ ಮಟ್ಟದ ಪರಿಶೀಲನಾ ಸಮಿತಿ ಸೂಚಿಸಬೇಕು. ಒಂದು ವೇಳೆ ರಾಜ್ಯ ಮಟ್ಟದ ಪರಿಶೀಲನಾ ಸಮಿತಿಗೆ ಅದು ಸಾಧ್ಯವಾಗದೆ ಇದ್ದರೆ, ಅದು ಕಾರಣಗಳನ್ನು ದಾಖಲಿಸಿ ಅವಧಿ ವಿಸ್ತರಣೆ ಮಾಡಬಹುದು. ಆದರೆ, ಯಾವುದೇ ಕಾರಣಕ್ಕೂ 6 ತಿಂಗಳು ಮೀರಬಾರದು ಎಂದು ಸಮಿತಿ ಹೇಳಿದೆ.