ಪೆರ್ಲ: ಪೆರ್ಲ ನಾಲಂದ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಖ್ಯೆ 49, 'ಆರೋಗ್ಯಕರ ಸಮಾಜದ ಕಡೆಗೆ ಸಾಮಾಜಿಕ ಸೇವೆ' 7 ದಿನಗಳ ಎನ್‍ಎಸ್‍ಎಸ್ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಮ`Á್ಯಹ್ನ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಎನ್‍ಎಸ್‍ಎಸ್ ಪ್ರೇರಣೆ ನೀಡುವುದು ಎಂದರು.
ಉಪಾಧ್ಯಕ್ಷೆ ಡಾ.ಫಾತಿಮತ್ ಜಹನಾಝ್ ಹಂಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಗಾಂಧೀಜಿ ಯವರ ಸರ್ವೋದಯ ತತ್ವ, ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯವನ್ನು ಪ್ರತಿಬಿಂಬಿಸುವ ನೆಲೆಯಲ್ಲಿ ಭಾರತ ಸರಕಾರವು ಎನ್‍ಎಸ್‍ಎಸ್ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದೆ.ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ ಜೀವನದಲ್ಲಿ ಗಾಂಧೀಜಿಯವರ ಆದರ್ಶ ಮೌಲ್ಯಗಳು ರೂಢಿಯಾಗುವುದು ಎಂದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್, ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ, ಶೇಣಿ, ಕಾಲೇಜು ಸಿಬ್ಬಂದಿ ಕಾರ್ಯದರ್ಶಿ ಕನ್ನಡ ಸಹ ಪ್ರಾಧ್ಯಾಪಕ ಕೇಶವ ಶರ್ಮ ಕೆ., ಕಾಸರಗೋಡು ಜಿ.ಪಂ.ಸದಸ್ಯ, ಕಾಲೇಜು ಪಿಟಿಎ ಉಪಾಧ್ಯಕ್ಷ ನಾರಾಯಣ ನಾಯ್ಕ್ ಮಾತನಾಡಿದರು.
ಎನ್‍ಎಸ್‍ಎಸ್ ಮಾಜಿ ಕಾರ್ಯದರ್ಶಿಗಳಾದ ದೀಕ್ಷಿತ್ ಸಿ.ಎಚ್., ಅಂಕಿತಾ ಬಿ.ಸಿ., ಹರ್ಷ ಕುಮಾರ್, ಅನುಶ್ರೀ ಉಪಸ್ಥಿತರಿದ್ದರು.ಎನ್‍ಎಸ್‍ಎಸ್ ಪೆÇ್ರೀಗ್ರಾಂ ಆಫೀಸರ್ ಸುರೇಶ್ ಕೆ.ಎಮ್. ಸ್ವಾಗತಿಸಿದರು.ಎನ್‍ಎಸ್‍ಎಸ್ ಮಾಜಿ ಕಾರ್ಯದರ್ಶಿ ಅನುಶ್ರೀ ವಂದಿಸಿದರು. ಕಾವ್ಯಾಚಂದ್ರನ್ ವಿ.ನಿರೂಪಿಸಿದರು. ಸಂಜೆ ನಡೆದ ಐಸ್ ಬ್ರೇಕಿಂಗ್ ಸೆಷನ್ ನಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲ ಮಹಮ್ಮದ್ ಅಲಿ ಭಾಗವಹಿಸಿದರು.ಸುರೇಶ್ ಕೆ.ಎಂ., ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಶಂಕರ ಕೆ., ಗ್ರಂಥಪಾಲಕಿ ರೇಣುಕಾ ಪಿ., ಸಿಬ್ಬಂದಿ ಅನಿತಾ ಉಪಸ್ಥಿತರಿದ್ದರು.
ಎಣ್ಮಕಜೆ ಗ್ರಾ.ಪಂ., ಕುಟುಂಬಶ್ರೀ ಘಟಕ, ವ್ಯಾಪಾರಿ ಸಮಿತಿ ಪೆರ್ಲ ಘಟಕ, ಶ್ರೀ ಶಂಕರ ಸೇವಾ ಸಮಿತಿ ಪೆರ್ಲ, ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಬಜಕೂಡ್ಲು ಸಹಕಾರ ಏಳು ದಿನಗಳ ಶಿಬಿರಕ್ಕೆ ನೆರವು ನೀಡುತ್ತಿದೆ.