HEALTH TIPS

ದಾಖಲೆ ಬರೆದ ತಿಮ್ಮಪ್ಪ: ಕೇವಲ 80 ನಿಮಿಷಗಳಲ್ಲಿ 4.6ಲಕ್ಷ ದರ್ಶನ ಟಿಕೆಟ್ ಗಳು ಬುಕ್!!

         ಅಮರಾವತಿ: ಖ್ಯಾತ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದ ಆನ್ ಲೈನ್ ದರ್ಶನ ಟಿಕೆಟ್ ಗಳು ದಾಖಲೆ ಸಮಯದಲ್ಲಿ ಬುಕ್ ಆಗಿವೆ.


       ಜನವರಿ ತಿಂಗಳ ಸುಮಾರು 4.6ಲಕ್ಷ ದರ್ಶನ ಟಿಕೆಟ್ ಗಳು ಕೇವಲ 80 ನಿಮಿಷದಲ್ಲೇ ಬುಕ್ ಆಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದ ಶ್ರೀವೆಂಕಟೇಶ್ವರ ಸ್ವಾಮಿಯ ವಿಶೇಷ ದರ್ಶನದ ಟಿಕೆಟ್‌ಗಳು ಕೇವಲ 80 ನಿಮಿಷಗಳಲ್ಲಿ ಖಾಲಿ ಆಗಿದೆ.

      ಜನವರಿ ತಿಂಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ವಿಶೇಷ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಇವು ಕೇವಲ 80 ನಿಮಿಷದಲ್ಲಿ ಟಿಕೆಟ್‌ಗಳು ಬುಕ್ ಆಗಿವೆ.

       ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್‌ನ ಬೆಲೆ 300 ರೂಪಾಯಿ ಇದ್ದು, ಸುಮಾರು 4 ಲಕ್ಷದ 60 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಜನವರಿಯಲ್ಲಿ ವೈಕುಂಠ ಏಕಾದಶಿಯ ಕಾರಣದಿಂದಾಗಿ ಹೆಚ್ಚಿನ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

       ಸರ್ವದರ್ಶನಂ ಟಿಕೆಟ್‌ಗಳನ್ನು ಇದೇ ತಿಂಗಳ 31ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ತಿರುಮಲದಲ್ಲಿ ವಸತಿ ಸೌಕರ್ಯದ ಮಾಹಿತಿಯನ್ನು ಇದೇ ತಿಂಗಳ 27ನೇ ತಾರೀಕಿನಂದು ಬೆಳಗ್ಗೆ 9 ಗಂಟೆಗೆ ಟಿಟಿಡಿ ಪ್ರಕಟ ಮಾಡಲಿದೆ. ಜನವರಿ 11ರಿಂದ 14ರವರೆಗೆ ವಸತಿಗಾಗಿ ಬುಕ್ ಮಾಡಬಹುದಾಗಿದೆ. ಇದಕ್ಕೆ ಟಿಕೆಟ್ ಕೊಳ್ಳುವ ವೇಳೆಯೇ ವಸತಿಗಾಗಿ ಮುಂಗಡವಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.

           ಟಿಕೆಟ್ ಬುಕ್ ಮಾಡುವ ವೇಳೆಯೇ ಸಮಯ ಮತ್ತು ದಿನಾಂಕವನ್ನು ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲೇ ಭಕ್ತರು ಶ್ರೀವೆಂಕಟೇಶ್ವರನ ದರ್ಶನ ಪಡೆಯಬಹುದಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries