HEALTH TIPS

ಶೇ 86 ರಷ್ಟು ಜನರಿಗೆ ಕೋವಿಡ್‌ ಲಸಿಕೆ ಮೊದಲ ಡೋಸ್ ಪೂರೈಕೆ: ಸಚಿವ ಮಾಂಡವೀಯ

              ನವದೆಹಲಿಭಾರತದ ಅರ್ಹ ಜನಸಂಖ್ಯೆಯ ಸುಮಾರು ಶೇ 86 ರಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಆದಷ್ಟು ಬೇಗ ಶೇ 100 ರ ಗುರಿಯನ್ನು ತಲುಪಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಶುಕ್ರವಾರ ಲೋಕಸಭೆಗೆ ತಿಳಿಸಿದರು.

             ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್‌ ಸೇರಿದಂತೆ ಇತರ ರಾಷ್ಟ್ರಗಳ ಕೋವಿಡ್‌ ಲಸಿಕೆ ನೀಡುವಿಕೆಯ ಮಟ್ಟದ ದತ್ತಾಂಶಗಳನ್ನು ಸಚಿವರು ಹಂಚಿಕೊಂಡರು. ಲಸಿಕೆ ನೀಡುವಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಅವರು ಪೂರಕ ಪ್ರಶ್ನೆಗಳಿಗೆ ಉತ್ತರಿಸಿದರು.

             ರಾಜ್ಯಗಳ ಬಳಿ ಇನ್ನೂ 7 ಕೋಟಿ ಲಸಿಕೆಗಳು ಬಾಕಿ ಉಳಿದಿವೆ ಎಂದ ಅವರು, ಲಸಿಕೆ ಪಡೆಯುಲು ಹಿಂಜರಿಕೆ ಮಾಡಿದರೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.

             ಓಮೈಕ್ರಾನ್‌ ರೂಪಾಂತರ ತಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ಅಧ್ಯಯನ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಈ ಹೊಸ ರೂಪಾಂತರಕ್ಕೆ ಯಾವ ಲಸಿಕೆಯು ಪರಿಣಾಮಕಾರಿ ಎಂಬುದು ತಿಳಿಯಲಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries