ಕಾಸರಗೋಡು: ನಿರ್ಮಾಣ ಸಾಮಗ್ರಿಗಳ ಗಣನೀಯ ಬೆಲೆಯೇರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಡಿ. 8ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಲಿದೆ.
ಕಬ್ಬಿಣ, ಸಿಮೆಂಟ್ ಮುಂತಾದ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ, ಮರಳು, ಕೆಂಪುಕಲ್ಲು, ಕಗ್ಗಲ್ಲು ಲಭ್ಯತೆಯಲ್ಲಿನ ಕೊರತೆಯಿಂದ ನಿರ್ಮಾಣವಲಯ ಸಂದಿಗ್ಧಾವಸ್ಥೆ ತಲುಪಿದೆ.ಈಗಾಗಲೇ ಕೋವಿಡ್ ಹಿನ್ನೆಲೆಯಲ್ಲಿ ಈ ವಲಯದಲ್ಲಿನ ನೂರಾರು ಮಂದಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕಚ್ಚಾಸಾಮಗ್ರಿ ಬೆಲೆಯೇರಿಕೆ ಈ ವಲಯವನ್ನು ಮತ್ತಷ್ಟು ಸಮಸ್ಯೆಗೆ ತಳ್ಳಿದೆ. ಕೆಂಪುಕಲ್ಲು ಕ್ವಾರೆಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಹಸ್ತಕ್ಷೇಪದಿಂದ ಕಲ್ಲಿನ ಕೊರತೆ ಹೆಚ್ಚಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಿ ನಿರ್ಮಾಣವಲಯವನ್ನು ಸಂರಕ್ಷಿಸುವಂತೆ ಆಗ್ರಹಿಸಿ ಧರಣಿ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.