HEALTH TIPS

ಭಾರತದಲ್ಲೇ ಉತ್ಪಾದನೆ ಆಗಲಿದೆ ಮತ್ತೊಂದು ಲಸಿಕೆ; ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿತ 9 ಲಸಿಕೆಗಳ ಪೈಕಿ 3 ಭಾರತದಲ್ಲೇ ತಯಾರಿ

           ಬೆಂಗಳೂರು: ಕೋವಿಡ್​ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ತಡೆ-ನಿಯಂತ್ರಣ ನಿಟ್ಟಿನಲ್ಲಿ ದೇಶದಲ್ಲಿ ಇನ್ನೊಂದು ಲಸಿಕೆ ಕೂಡ ಉತ್ಪಾದನೆ ಆಗಲಿದೆ. ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿತ 9 ಲಸಿಕೆಗಳ ಪೈಕಿ ಮೂರು ಭಾರತದಲ್ಲೇ ಉತ್ಪಾದನೆ ಆದಂತಾಗಲಿದೆ.

            ಈ ಕುರಿತು ಆರೋಗ್ಯ ಕರ್ನಾಟಕದ ಸಚಿವ ಡಾ.ಕೆ.ಸುಧಾಕರ್ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಂದು ಲಸಿಕೆಗೆ ಅನುಮತಿ ನೀಡಿದೆ. ಕೊವೊವ್ಯಾಕ್ಸ್ (Covovax) ಹೆಸರಿನ ಲಸಿಕೆಯನ್ನು ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸಲಿದೆ ಎಂದು ಅವರು ತಿಳಿಸಿದ್ದಾರೆ.


             ಇನ್ನೊಂದು ವ್ಯಾಕ್ಸಿನ್​ಗೆ ತುರ್ತು ಅನುಮತಿ ನೀಡಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿಕೊಂಡಿದ್ದು, ವ್ಯಾಕ್ಸಿನ್​ ಕುರಿತ ಮಾಹಿತಿಯನ್ನು ಮತ್ತಷ್ಟು ವಿವರವಾಗಿ ತಿಳಿಸಿದೆ. ನೊವಾವ್ಯಾಕ್ಸ್​ (Novavax) ಕಂಪನಿಯ ಪರವಾನಗಿ ಅಡಿ ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕೊವೊವ್ಯಾಕ್ಸ್ ಉತ್ಪಾದನೆ ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries