ಕೌನ್ ಬನೇಗಾ ಕರೋಡ್‌ಪತಿ' ಶೋನ 3ನೇ ಸೀಸನ್ ಪ್ರಸಾರ ಆಗುತ್ತಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಇದರ ಸಾರಥ್ಯ ವಹಿಸಿದ್ದಾರೆ. ಸ್ಟುಡೆಂಟ್ಸ್ ಸ್ಪೆಷನ್ ಎಪಿಸೋಡ್‌ನಲ್ಲಿ ಹಿಮಾಚಲ ಪ್ರದೇಶದ 9 ವರ್ಷದ ಅರುಣೋದಯ್ ಶರ್ಮಾ ಎಂಬ ಹುಡುಗ ಅಮಿತಾಭ್ ಅವರನ್ನೇ ಇಂಪ್ರೆಸ್ ಮಾಡಿದ್ದಾನೆ.
ಹಾಟ್ ಸೀಟ್‌ನಲ್ಲಿ ಕೂತುಕೊಳ್ಳಲು ಆಯ್ಕೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ನೃತ್ಯದ ಹೆಜ್ಜೆ ಹಾಕುತ್ತ ಹಾಟ್ ಸೀಟ್‌ನಲ್ಲಿ ಕೂತು ಕ್ಷಣ ಕ್ಷಣವೂ ಅಮಿತಾಭ್ ನಗುವಂತೆ, ಅಚ್ಚರಿ ಎನಿಸುವಂತೆ ಅರುಣೋದಯ್ ಮಾತನಾಡಿದ್ದಾನೆ. ಅರುಣೋದಯ್ ಪದದ ಅರ್ಥದ ಜೊತೆಗೆ ತನ್ನ ಮನೆಯವರು ಹೇಗೆ ಇದ್ದಾರೆ? ತನಗೆ ಏನು ಇಷ್ಟ? ತನಗೆ ಏನು ಇಷ್ಟ ಇಲ್ಲ? ತಾನು ಯಾಕೆ ಇಷ್ಟೊಂದು ಮಾತನಾಡುತ್ತೇನೆ? ತನಗೆ ಭವಿಷ್ಯದಲ್ಲಿ ಏನಾಗಬೇಕೆಂಬ ಆಸೆಯಿದೆ? ಈ ಎಲ್ಲ ವಿಷಯಗಳ ಬಗ್ಗೆ ಅರುಣೋದಯ್ ಮಾತನಾಡಿದ್ದಾನೆ.
ಅರುಣೋದಯ್ ಗೆದ್ದಿದ್ದೆಷ್ಟು?
ನನ್ನ ಕನಸು ಯಾವಾಗ ಬದಲಾಗತ್ತೆ ಅಂತ ನನಗೆ ಗೊತ್ತಿಲ್ಲ, ಉದ್ಯಮಿ ನೋಡಿದಕೂಡಲೇ ಉದ್ಯಮಿಯಾಗಬೇಕು ಎನಿಸತ್ತೆ. ಐಎಎಸ್ ಆಫೀಸರ್ ಕಾರ್ಯಕ್ರಮ ನೋಡಿದರೆ ಐಎಎಸ್ ಆಗಬೇಕು ಎನಿಸತ್ತೆ. ಹೀಗಾಗಿ ನನ್ನ ಕನಸು ಯಾವಾಗ ಬದಲಾಗತ್ತೆ ಎಂಬುದು ನನಗೆ ಗೊತ್ತಾಗಲ್ಲ. ನನ್ನ ಹೈಟ್ ನನಗೆ ಇಷ್ಟ ಇಲ್ಲ. ಆನ್‌ಲೈನ್ ಕ್ಲಾಸ್ ಆಗಿ ಬರೋದಿಲ್ಲ ಎಂದು ಕೂಡ ಅರುಣೋದಯ್ ಶರ್ಮಾ ಹೇಳಿದ್ದಾರೆ. 25 ಲಕ್ಷ ರೂಪಾಯಿಯ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲನಾದ ಅರುಣೋದಯ್, 12.5 ಲಕ್ಷ ರೂಪಾಯಿ ಗೆದ್ದಿದ್ದಾನೆ. ಯಾಕೆ ಅರುಣೋದಯ್ ಈ ಶೋನಲ್ಲಿ ಭಾಗವಹಿಸಿದ್ದಾನೆ?
"ನನ್ನ ಬಳಿ 5 ಸಾವಿರ ರೂಪಾಯಿ ಇದೆ, ಕೌನ್ ಬನೇಗಾ ಕರೋಡ್‌ಪತಿಗೆ ಬರಬೇಕು ಅಂತಿರಲಿಲ್ಲ. 20 ರೂಪಾಯಿಯನ್ನು ಜೇಬಿನಲ್ಲಿ ಇಟ್ಟುಕೊಂಡು ತಿರುಗುವುದರಲ್ಲಿ ಮಜ ಬರಲ್ಲ. ಹೇಗೂ ಕೌನ್ ಬನೇಗಾ ಕರೋಡ್‌ಪತಿ ಶೋಗೆ ಆಯ್ಕೆಯಾದೆ. ಹೀಗಾಗಿ ಈ ಆಟ ಆಡಲು ಬಂದಿದ್ದೇನೆ" ಎಂದು ಅರುಣೋದಯ್, ಅಮಿತಾಭ್ ಬಳಿ ಹೇಳಿದ್ದಾನೆ. ಆತನ ಮಾತು ಕೇಳಿ ಅಮಿತಾಭ್ ಸಿಕ್ಕಾಪಟ್ಟೆ ನಕ್ಕಿದ್ದಾರೆ.

ಅರುಣೋದಯ್ ಫೋಟೋ ಹಂಚಿಕೊಂಡ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರು ಶೋನಲ್ಲಿ ಹೇಗೆ ಮಾತನಾಡುತ್ತಾರೆ? ಹೇಗೆ ಸ್ಪರ್ಧಿಗಳನ್ನು ಗೊಂದಲಕ್ಕೀಡು ಮಾಡುತ್ತಾರೆ? ಎಂಬುದನ್ನು ಕೂಡ ಅರುಣೋದಯ್ ಅವರು ಮಿಮಿಕ್ರಿ ಮಾಡಿ ತೋರಿಸಿದ್ದಾನೆ. ಅರುಣೋದಯ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ಅಮಿತಾಭ್ ಬಚ್ಚನ್ "ದಯವಿಟ್ಟು ಈ ಚಿಕ್ಕ ಹುಡುಗ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಆಡೋದನ್ನು ನೋಡಲು ಮರೆಯಬೇಡಿ. ಈತ ನಂಬಲಸಾಧ್ಯ ಎನಿಸುವಂತೆ ಇದ್ದಾನೆ" ಎಂದು ಹೇಳಿದ್ದಾನೆ.