ಕಾಸರಗೋಡು: ಪಾರಂಪರಿಕ ಮೀನುಗಾರಿಕೆಗಾಗಿ ಸೀಮೆ ಎಣ್ಣೆ ಪರ್ಮಿಟ್ ವಿತರಿಸುವ ನಿಟ್ಟಿನಲ್ಲಿ ಮೀನುಗಾರಿಕಾ ದೋಣಿ ಮತ್ತು ಯಂತ್ರಗಳನ್ನು ಫಿಶರೀಸ್, ಮತ್ಸ್ಯಫೆಡ್ ಹಾಗೂ ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಜ. 9ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಜಂಟಿ ತಪಾಸಣೆ ನಡೆಸುವರು.
ಕಾಸರಗೋಡು ಕಸಬಾ ಕಡಪ್ಪುರದ ಫಿಶರೀಸ್ ಕಚೇರಿ ಕಾಂಪ್ಲೆಕ್ಸ್, ಫಿಶರೀಸ್ ಯು.ಪಿ ಶಾಲೆ, ಕುಂಬಳೆ ಆರಿಕ್ಕಾಡಿ, ಉಪ್ಪಳ ಮೂಸೋಡಿ ಅದಿಕ್ಕ, ಮಂಜೇಶ್ವರ ಹೊಸಬೆಟ್ಟು ಕಡಪ್ಪುರ, ಬೇಕಲ ಮುಂತಾದೆಡೆ ತಪಾಸಣೆ ನಡೆಯಲಿದೆ. ಹತ್ತು ವರ್ಷದೊಳಗಿನ ಯಂತ್ರಗಳನ್ನು ಮಾತ್ರ ತಪಾಸಣೆಗೊಳಪಡಿಸಲಾಗುವುದು. ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ಮತ್ಸ್ಯಫೆಡ್‍ನ ವಿವಿಧ ಕಚೇರಿಗಳಲ್ಲಿ ಲಭ್ಯವಿದೆ. ಅಗತ್ಯ ದಾಖಲೆಗಳ ಅಸಲು ಹಾಗೂ ನಕಲು ಪ್ರತಿಗಳೊಂದಿಗೆ ಆಯಾ ಮತ್ಸ್ಯಭವನ ಕೇಂದ್ರಗಳಲ್ಲಿ ಡಿ. 30ರ ಒಳಗೆ ಅರ್ಜಿ ಸಲ್ಲಿಸಬೇಕು. ದೋಣಿ ಹಾಗೂ ಯಂತ್ರವನ್ನು ಏಕ ಕಾಲಕ್ಕೆ ಹಾಜರುಪಡಿಸದವರಿಗೆ ಪರ್ಮಿಟ್ ಮಂಜೂರುಗೊಳಿಸಲಾಗದು ಎಂದು ಪ್ರಕಟಣೆ ತಿಳಿಸಿದೆ.