ಅಲ್ವಾರ್: ರಾಜಸ್ತಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು 9 ಮಂದಿ ಶಿಕ್ಷಕರು ನಾಲ್ಕು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಹಾಗೂ ವಿಕೃತ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೇಸು ದಾಖಲಾಗುತ್ತಿದ್ದಂತೆ ಶಾಲೆಯ ಮತ್ತಷ್ಟು ವಿದ್ಯಾರ್ಥಿನಿಯರು ತಮ್ಮ ಮೇಲಾದ ದೌರ್ಜನ್ಯ ಹೇಳಿಕೊಳ್ಳಲು ಮುಂದೆ ಬಂದಿ ದ್ದಾರೆ. ಪುರುಷ ಶಿಕ್ಷಕರ ಕೃತ್ಯಕ್ಕೆ ಮಹಿಳಾ ಶಿಕ್ಷಕಿಯರು ಸಾಥ್ ನೀಡಿರುವುದು ಆಘಾತ ತಂದಿದೆ.
10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗಲು ನಿರಾಕರಿಸಿದ್ದರು. ಆಕೆಯ ತಂದೆ ಕಾರಣ ಕೇಳಿದಾಗ ಮುಜುಗರ ದಿಂದಲೇ ವಿಷಯ ಬಾಯಿಬಿಟ್ಟಿದ್ದು, ಶಾಲಾ ಪ್ರಾಂಶುಪಾಲರು ಹಾಗೂ ಮೂವರು ಶಿಕ್ಷಕರು ಒಂದು ವರ್ಷದಿಂದಲೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದು, ಅದಕ್ಕೆ ಇಬ್ಬರು ಮಹಿಳಾ ಶಿಕ್ಷಕಿಯರು ಸಹಕಾರ ನೀಡಿ ವಿಡಿಯೋ ಚಿತ್ರೀಕರಿಸಿ ಕೊಂಡಿರುವುದಾಗಿ ತಿಳಿಸಿದ್ದಾಳೆ.
ಮಂಧಾನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. 6,4 ಹಾಗೂ 3ನೇ ತರಗತಿಯ ವಿದ್ಯಾರ್ಥಿಗಳು ಮುಂದೆ ಬಂದಿದ್ದು, ಪ್ರಾಂಶುಪಾಲರು ಹಾಗೂ ಶಿಕ್ಷಕರಿಂದ ತಮಗಾದ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಹಿಳಾ ಶಿಕ್ಷಕಿಯರೇ ವಿದ್ಯಾರ್ಥಿನಿಯನ್ನು ಮೂರು ಜನ ಶಿಕ್ಷಕರು ಸೇರಿದ್ದ ಮನೆಗೆ ಕರೆದುಕೊಂಡು ಹೋಗಿದ್ದು, ಪ್ರಾಂಶುಪಾಲರು ಕೂಡ ಇದ್ದರು. ಎಲ್ಲರೂ ನನ್ನ ಬಟ್ಟೆ ಕಳಚಿ ದೌರ್ಜನ್ಯ ವೆಸಗಿದ್ದರು ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ.