ತಿರುವನಂತಪುರಂ: ದೇಶದಲ್ಲಿ ಇಬ್ಬರಿಗೆ ಓಮಿಕ್ರಾನ್ ವೇರಿಯಂಟ್ ಇರುವುದು ದೃಢಪಟ್ಟಿರುವುದರಿಂದ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಆರ್‌ಟಿಪಿಸಿ ಆರ್ ಪರೀಕ್ಷೆ, ಏಳು ದಿನಗಳ ಕ್ವಾರಂಟ್ಯೆನ್ ಬಳಿಕ ಆರ್.ಟಿ.ಪಿ.ಸಿ.ಆರ್ ಮರು ಪರೀಕ್ಷೆ ಮತ್ತು ಪುನಃ ಸ್ವಯಂ-ಮೇಲ್ವಿಚಾರಣೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನವನ್ನು ರಾಜ್ಯವು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ ಎಂದು ಅವರು ಹೇಳಿದರು.
ಇಂದು ದೇಶದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಕರ್ನಾಟಕದ ಇಬ್ಬರಿಗೆ ಈ ರೋಗ ಪತ್ತೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಅವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ದೃಢಪಡಿಸಲಾಗಿದೆ.