ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು ಅನುವು ಮಾಡಿಕೊಡುವ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.
ಇದರ ಜತೆಗೆ ಮತದಾರರ ಪಟ್ಟಿಗೆ ನೋಂದಣಿ, ಮತದಾನದ ಹಕ್ಕು ಮತ್ತು ಚುನಾ ವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಲು ಮಸೂದೆ ಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ಯಾನ್ ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಿಸಿದ ರೀತಿಯಲ್ಲಿಯೇ ಮತದಾರರ ಗುರುತಿನ ಚೀಟಿಗೂ ಆಧಾರ್ ಸಂಖ್ಯೆ ಜೋಡಿಸಲಾಗುತ್ತದೆ. ಇದು ಕಡ್ಡಾಯವಲ್ಲ. ಆದರೆ, ಆಧಾರ್ ಮಾಹಿತಿ ಮೂಲಕ ಮತದಾರರ ಗುರುತಿನ ಚೀಟಿಯ ಮಾಹಿತಿ ಕಳುವಾಗುವುದನ್ನು ತಡೆಯುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ಆಧಾರ್ ಸಂಖ್ಯೆ ಜೋಡಣೆಯಿಂದ, ನಕಲಿ ಗುರುತಿನ ಚೀಟಿಗಳಿಗೆ ಕಡಿವಾಣ ಹಾಕಬಹುದು' ಎಂದು ಕಾನೂನು ಸಚಿವಾಲಯವು ಹೇಳಿದೆ.
ಈವರೆಗೆ ಸೇನೆಯ ಪುರುಷ ಸಿಬ್ಬಂದಿಯ ಪತ್ನಿ ಮತದಾನ ಮಾಡಲು ಅವಕಾಶವಿತ್ತು. ಸೇನೆ ಯ ಮಹಿಳಾ ಸಿಬ್ಬಂದಿಯ ಪತಿ ಮತದಾನ ಮಾಡಲು ಅವಕಾಶ ಇರಲಿಲ್ಲ. ಈ ನಿಯಮಕ್ಕೆ ಬದಲಾ ವಣೆ ತರಲಾಗುತ್ತಿದೆ. ಈಗ ಪ್ರತಿ ವರ್ಷ ಜನವರಿ 1ಕ್ಕೂ ಮೊದಲು 18 ವರ್ಷ ತುಂಬಿದವರು ಮಾತ್ರ ಮತ ದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜನವರಿ 2ರ ನಂತರ 18 ವರ್ಷ ತುಂಬಿದವರು ಪಟ್ಟಿಗೆ ಹೆಸರು ಸೇರಿ ಸಲು ಮುಂದಿನ ವರ್ಷದ ಜನವರಿ 1ರವರೆಗೂ ಕಾಯ ಬೇಕಿತ್ತು. ಈಗ ಈ ನಿಯಮಕ್ಕೆ ಬದಲಾವಣೆ ತರಲಾಗುತ್ತಿದೆ. ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿ ಸಲು ಅವಕಾಶ ನೀಡಲಾಗುತ್ತದೆ' ಎಂದು ಸಚಿವಾಲಯವು ವಿವರಿಸಿದೆ.
ಮತದಾನ ನಡೆಸಲು ಈಗ ಚುನಾವಣಾ ಆಯೋಗವು ಆಯ್ಕೆ ಮಾಡುವ ಶಾಲೆಗಳ ವಿಚಾರದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಶಾಲೆ ಅಥವಾ ಮತದಾನದ ಸ್ಥಳ ಆಯ್ಕೆ ವಿಚಾರದಲ್ಲಿ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ' ಎಂದು ಸಚಿವಾಲಯವು ಹೇಳಿದೆ.